ಎಚ್‌ಐವಿ ತಡೆಗೆ ಪ್ರಚಾರಾಂದೋಲನ: ಆರೋಗ್ಯ ಸಚಿವರಿಂದ ಚಾಲನೆ

Raghu_12_Youth_Day_@_Arogya_Soudha (3)
Published on

ಬೆಂಗಳೂರು: ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಎಚ್‌ಐವಿ ತಡೆಗಟ್ಟಲು ಪ್ರಚಾರಾಂದೋಲ ತೀವ್ರಗೊಳಿಸಲು ಯುವಜನತೆಯ ಡಿಜಿಟಲ್ ಮಾರ್ಗಗಳ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಡ್ರಗ್ಸ್ ಸೇವನೆ ಹಾಗೂ ಅಸುರಕ್ಷಿತ ಲೈಂಗಿಕತ ಸಂಪರ್ಕದಿಂದಾಗಿ ರಾಜ್ಯದಲ್ಲಿ ಯುವಜನರಲ್ಲಿ ಎಚ್‌ಐವಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟ್ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.

ಸೋಂಕಿತ ವ್ಯಕ್ತಿ ಡ್ರಗ್ಸ್ ಪಡೆಯಲು ಬಳಸಿದ ಸಿರಿಂಜ್, ಸೂಜಿಯನ್ನು ಮರು ಬಳಕೆ ಮಾಡುವುದರಿಂದ ಯುವಕರಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗುತ್ತಿದೆ. ಯುವಜನತೆ ದೇಶದ ಸಂಪತ್ತು. ಈ ನಿಟ್ಟಿನಲ್ಲಿ ಯುವಜನತೆಯನ್ನು ಸದೃಢಗೊಳಿಸುವ ಮೂಲಕ ಎಚ್‌ಐವಿ ಮತ್ತು ಇತರೆ ಬೇರೆ ವ್ಯಸನಗಳಿಂದ ಅವರನ್ನು ರಕ್ಷಿಸುವ ಅಗತ್ಯವಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಪ್ರಸ್ತಿಕ ಸಾಲಿನಲ್ಲಿ 68,450 ಮಂದಿಯಲ್ಲಿ ಎಚ್‌ಐವಿ ಸೋಂಕು ವರದಿಯಾಗಿದೆ. ರಾಜ್ಯದಲ್ಲಿ 2.28 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 1.91 ಲಕ್ಷ ಸೋಂಕಿತರು ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾಸಾಪ್ಸ್ ಕೈಗೊಂಡಿರುವ ಹಲವು ಜಾಗೃತಿ ಕ್ರಮಗಳಿಂದಾಗಿ ಹಾಗೂ ಜನರಲ್ಲಿ ವೈಯಕ್ತಿಕ ಸುರಕ್ಷತೆಯ ಅರಿವಿನಿಂದಾಗಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಈ ಅರಿವು ಇನ್ನೂ ಹೆಚ್ಚಾಗಬೇಕು ಎಂದರು.

ಎಸ್‌ಎಂಎಸ್ ಅಭಿಯಾನ ಮೂಲಕ ಕಾಲೇಜುಗಳಲ್ಲಿ ಇ-ಕ್ವಿಜ್ ಹಾಗೂ ಭಿತ್ತಿಚಿತ್ರ ಸ್ಪರ್ಧೆ ಸೇರಿ ಇತರೆ ಮಾಧ್ಯಮಗಳ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ. ಹೈ-ರಿಸ್ಕ್ ಪ್ರದೇಶಗಳಲ್ಲಿ ಮೊಬೈಲ್ ವ್ಯಾನ್ ಸಹಾಯದೊಂದಿಗೆ ಆಪ್ತ ಸಮಾಲೋಚನೆ ಹಾಗೂ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಮಾಲ್‌ಗಳು, ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ್ಲಾಶ್ ಮೊಬ್ಸ್‌ಗಳ ಮೂಲಕ ಜನಜಾಗೃತಿ ಮೂಡಿಸುವುದು ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆ ಮೂಲಕ 2030ರ ವೇಳೆಗೆ ರಾಜ್ಯದಲ್ಲಿ ಎಚ್‌ಐವಿ ಸೋಂಕು ನಿರ್ಮೂಲನೆಗೊಳಿಸುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.

ವಿಶೇಷ ಜಾಗೃತಿ: ಪ್ರಸ್ತುತ ಚಾಲನೆ ದೊರೆತಿರುವ ಈ ಜಾಗೃತಿ ಆಂದೋಲನದ ಭಾಗವಾಗಿ ಸರ್ಕಾರಿ ಬಸ್ಸ್‌ಗಳಲ್ಲಿ ಬ್ರಾೃಂಡಿಂಗ್, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ, ವಿವಿಧ ಇಲಾಖೆಯ ಅಧಿಕಾರಿಗಳಿಗೆ, ನೌಕರರಿಗೆ ಎಚ್‌ಐವಿ ಸೋಂಕಿನ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಅರಿವು ಮೂಡಿಸಲಾಗುತ್ತದೆ. ಆಕಾಶವಾಣಿ, ದೂರದರ್ಶನ, ಎ್ಎಂಗಳಲ್ಲಿ ಎಚ್‌ಐವಿ ಸೋಂಕಿನ ಕುರಿತು ಜಾಗೃತಿ ಕಾರ್ಯಕ್ರಮಗಳು ಪ್ರಸಾರವಾಗಲಿದೆ ಎಂದು ತಿಳಿಸಿದರು. ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net