ಕೇಂದ್ರೀಯ ವಿವಿಯಲ್ಲಿ ಅಂತಾರಾಷ್ಟ್ರೀಯ ಕಾರ್ಯಾಗಾರ

New Project (21)
Published on

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ಐಇಇಇ ವಿದ್ಯಾರ್ಥಿಗಳ ಶಾಖೆ ಜಂಟಿಯಾಗಿ ಎರಡು ದಿನಗಳ ಅಂತಾರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಿತ್ತು.

ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ.ರಾಜೇಂದ್ರ ಪಿಲಾಂಗಟ್ಟೆ ಉದ್ಘಾಟಿಸಿದರು. ಪಾಟ್ನಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ.ಅರುಣ್ ಕುಮಾರ್ ಸಿನಾಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೊ.ರಾಜೇಂದ್ರ ಪಿಲಾಂಗಟ್ಟೆ, ಡಾ.ಸೆಬಾಸ್ಟಿಯನ್ ಜಾರ್ಜ್, ಡಾ.ಸುನೀಲ್ ಕುಮಾರ್, ಡಾ.ಜೆರಿನ್‌ಪಾಲ್ ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಶ್ರೇಷ್ಠ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಜೆ.ಎಸ್.ಜಯಸುಧಾ, ಪ್ರೊ.ಆರ್.ರಾಜೇಶ್, ಡಾ.ಟಿ.ಎಂ.ತಸ್ಲೀಮಾ, ಡಾ.ಮನೋಹರ ನಾಯ್ಕ, ಡಾ.ಕುಮಾರ್, ಡಾ.ವಿ.ಆದಿತ್ಯ ಉಪಸ್ಥಿತರಿದ್ದರು. ವಿವಿಧ ದೇಶಗಳಿಂದ ಆಗಮಿಸಿದ ತಜ್ಞರು ಪ್ರಬಂಧ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net