ಆಯುಷಿ ಎಸ್. ಶೆಟ್ಟಿಗೆ ತೃತೀಯ ಸ್ಥಾನ

ayushi
Published on

ಬೈಂದೂರು: ಇಲ್ಲಿನ ಜೆಎನ್‌ಆರ್ ಕಲಾಮಂದಿರದಲ್ಲಿ ನಡೆದ ಆರ್‌ಬಿಕೆಐ ಕರ್ನಾಟಕ ಇಂಡಿಯಾ ಆಯೋಜಿಸಿದ ರೈನ್‌ಬೋ ಕೆಬಿಐ ಇಂಟರ್‌ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಜಡ್ಕಲ್‌ನ ಸೆಕ್ರೆಡ್ ಹಾರ್ಟ್ ಅಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಆಯುಷಿ ಎಸ್. ಶೆಟ್ಟಿ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ಹೊಸೂರು ಗ್ರಾಮದ ಸುಂದರ್ ಶೆಟ್ಟಿ ಬೆಳ್ಳಾಲ ಹಾಗೂ ಆಶಾ ಶೆಟ್ಟಿ ದಂಪತಿ ಪುತ್ರಿ. ಕರಾಟೆ ಶಿಕ್ಷಕ ಶ್ರೀಧರ ವಸ್ರೆಯವರಿಂದ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net