

ಕಾರವಾರ: ಅಂತಾರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ವಿವಿಧ ಸಂಘಟನೆಗಳ ಸದಸ್ಯರು ಇಲ್ಲಿನ ಅಲಿಗದ್ದಾ ಕಡಲ ತೀರ ಸ್ವಚ್ಛತೆ ನಡೆಸಿದರು.
ಸುಮಾರು 1 ತಾಸಿನಲ್ಲಿ 100 ಜನರು ಅಲಿಗದ್ದಾ ಕಡಲ ತೀರದ 500 ಮೀಟರ್ ವ್ಯಾಪ್ತಿಯಲ್ಲಿ 397 ಕೆಜಿ ತ್ಯಾಜ್ಯ ಸಂಗ್ರಹಿಸಿದರು. ಅದರಲ್ಲಿ 125 ಕೆಜಿ ಪ್ಲಾಸ್ಟಿಕ್ ಚೀಲಗಳು, 135 ಕಜಿ ಮೀನಿನ ಬಲೆಗಳು, 31 ಕೆಜಿ ಪ್ಲಾಸ್ಟಿಕ್ ಬಾಟಲ್, 25 ಕೆಜಿ ಪಾದರಕ್ಷೆಗಳು, 20 ಕೆಜಿ ಗಾಜಿನ ಬಾಟಲಿಗಳು, 9 ಕೆಜಿ ಪ್ಲಾಸ್ಟಿಕ್ ಡಬ್ಬಗಳು, 9 ಕೆಜಿ ಥರ್ಮೋಕೋಲ್, 8 ಕೆಜಿ ಬಟ್ಟೆಗಳು ಹಾಗೂ 199 ಕೆಜಿ ಇತರ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು.
ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ ಸಿಬ್ಬಂದಿ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 55 ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ 15 ಹಾಗೂ ಕೋಸ್ಟಲ್ ಸೆಕ್ಯುರಿಟಿ ಪೊಲೀಸ್‌ನ 10 ಸಿಬ್ಬಂದಿ ಸೇರಿ 100 ಕ್ಕೂ ಅಽಕ ಜನರು ಪಾಲ್ಗೊಂಡರು.
ಡಿಎಫ್‌ಒ ಸಿ.ರವಿಶಂಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರಾವಳಿ ಕಾವಲುಪಡೆಯ ಇನ್ಸ್ಪೆಕ್ಟರ್ ನಿಶ್ಚಲಕುಮಾರ್ ಅತಿಥಿಯಾಗಿದ್ದರು. ಅರಣ್ಯ ಕಡಲ ದಳದ ಪ್ರಮೋದ ನಾಯಕ ವಂದಿಸಿದರು. ಡಾ.ಶಿವಕುಮಾರ ಹರಗಿ, ಡಾ.ಹನುಮಂತ ಮಸ್ತಾರಿ, ಡಾ.ಶ್ರೀದೇವಿ ಹಕ್ಕಿಮನಿ, ಡಾ.ಶಾಹಿನ್ ಶೇಖ್, ಡಾ.ಸುಜಲ್ ರೇವಣಕರ್, ರಾಮು ರಾಠೋಡ, ಸೂರಜ್ ಪೂಜಾರ, ಶಾನವಾಜ ಶೇಖ್ ಇದ್ದರು.