ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಸಭೆ

vishesha sabhe
ಕೋಟ ಗ್ರಾಪಂ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಶೇಷ ಸಭೆಯಲ್ಲಿ ಪಿಡಿಒ ಸುರೇಶ್ ಬಂಗೇರ ಮಾಹಿತಿ ನೀಡಿದರು.
Published on

ಕೋಟ: ಗ್ರಾಪಂ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬುಧವಾರ ಕೋಟ ಗ್ರಾಪಂ ಸಭಾಂಗಣದಲ್ಲಿ ವಿಶೇಷ ಸಭೆ ಆಯೋಜಿಸಲಾಯಿತು.

ಉಡುಪಿ ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯುವ ಪ್ರಜಾಪ್ರಭುತ್ವ ದಿನದಲ್ಲಿ ಸಂಘಸಂಸ್ಥೆ, ಸ್ಥಳೀಯ ಶಾಲಾ ಕಾಲೇಜುಗಳು, ವಿವಿಧ ಇಲಾಖೆಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪಿಡಿಒ ಸುರೇಶ್ ಬಂಗೇರ ಸಮಗ್ರ ಮಾಹಿತಿ ನೀಡಿದರು.

ಕೋಟದಿಂದ ತೆಕ್ಕಟ್ಟೆವರೆಗೆ ಮಾನವ ಸರಪಳಿ ರಚಿಸಿ ವಿವಿಧ ಸಂಘಸಂಸ್ಥೆ ಟ್ಯಾಬ್ಲೋ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮ ಆಯೋಜಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಹಿತ ವಿವರಿಸಿದರು.

ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಜಿಲ್ಲಾಡಳಿತ ನಿರ್ದೇಶನದ ಈ ಮಾನವ ಸರಪಳಿಯನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು. ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ್, ಕೋಟ ಮಣೂರು ಪಪೂ ಕಾಲೇಜು ಪ್ರಾಂಶುಪಾಲ ಡೆನಿಸ್ ಬಾಂಝಾ ಇದ್ದರು. ಪಂಚಾಯಿತಿ ಕಾರ್ಯದರ್ಶಿ ಶೇಖರ್ ಮರವಂತೆ ನಿರ್ವಹಿಸಿದರು. ವಿವಿಧ ಸಂಘಸಂಸ್ಥೆ ಪ್ರಮುಖರು, ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಭಾಗಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net