ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ

15 rtl 02
Published on

ರಟ್ಟಿಹಳ್ಳಿ: ಪಟ್ಟಣದ ಪ್ರಿಯದರ್ಶಿನಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಮಾಡಲಾಯಿತು.


ಪ್ರಾಚಾರ್ಯ ಎ.ಜಿ. ರಾಘವೇಂದ್ರ ಮಾತನಾಡಿ, ವಿದ್ಯಾರ್ಥಿಗಳು ದೇಶದ ಸಂವಿಧಾನವನ್ನು ತಿಳಿಯಬೇಕು, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಇರುವ ಜವಬ್ದಾರಿಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಸಂವಿಧಾನವು ಸಮಾನತೆ, ಭ್ರಾತ್ವತ್ವ, ಸೋದರತೆ ಮತ್ತು ಸಹಬಾಳ್ವೆಯ ಸಂಕೇತವಾಗಿದೆ ಎಂದು ಹೇಳಿದರು.


ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರಸ್ತಾವನೆಯ ಪೀಠಿಕೆ ಬೋಧಿಸಲಾಯಿತು.


ಡಾ. ವೆಂಕಟೇಶ ಎಚ್, ಡಾ. ಎಚ್.ಬಿ. ಕೆಂಚಳ್ಳಿ, ಡಾ. ವೈ.ವೈ. ಮರಳೀಹಳ್ಳಿ, ವಿಜಯಲಕ್ಷ್ಮೀ ರೂಳಿ, ಶಾಂತಮ್ಮ ಎಚ್.ಎಚ್, ಎಚ್. ಬ್ಯಾಡಗೌಡ್ರ, ನಾಗರಾಜ ನಾಯ್ಕ, ಎಸ್.ಎಸ್. ತಾಂದಳೆ, ಯಲ್ಲಪ್ಪ ಸುರಗೀಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net