ಸೌತಡ್ಕ ಸೇವಾಧಾಮದಲ್ಲಿ ಸಂವಾದಾತ್ಮಕ ಕಾರ್ಯಾಗಾರ

Published on

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಸೇವಾಧಾಮ ಪುನಶ್ಚೇತನ ಕೇಂದ್ರ ಸೌತಡ್ಕದಲ್ಲಿ ’ಸಿಬ್ಬಂದಿಗಳ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ’ದ ಅಡಿಯಲ್ಲಿ ಮಾನವ ಸಂಬಂಧಗಳು ಮತ್ತು ಧನಾತ್ಮಕ ಮನೋಭಾವದ ಕುರಿತು ಸಂವಾದಾತ್ಮಕ ಕಾರ್ಯಾಗಾರವನ್ನು ಎಸ್‌ಡಿಎಂ ವಸತಿಯುತ ಪಿ.ಯು. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಟಿ.ಕೃಷ್ಣಮೂರ್ತಿ ನಡೆಸಿಕೊಟ್ಟರು.

ವ್ಯಕ್ತಿಗತ ಚಿಂತನೆಯಲ್ಲಿ ನಕಾರಾತ್ಮಕ ಮನೋಭಾವ ಹೊಂದಿದ್ದರೆ ಅದರ ಪ್ರತಿಯಾಗಿ ಪಡೆಯಲಿರುವುದು ನಕಾರಾತ್ಮಕತೆ ಮಾತ್ರ. ಸಕಾರಾತ್ಮಕ ಮನೋಭಾವ ಕಾಪಾಡಿಕೊಳ್ಳಲು ಪ್ರಯತ್ನಿಸುವುದರಿಂದ ಸಂಬಂಧದ ಬಗ್ಗೆ ಕಾಳಜಿ ವಹಿಸುತ್ತೀರಿ ಎಂದರು. ನಿತ್ಯ ಜೀವನದ ಒತ್ತಡದ ನಡುವೆ ಮಾನವೀಯ ಸಂಬಂಧ ಮತ್ತು ಧನಾತ್ಮಕ ಮನೋಭಾವನೆಯ ಪ್ರಾಮುಖ್ಯತೆ ಬಗ್ಗೆ ಸವಿಸ್ತಾರವಾಗಿ, ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಮಾಹಿತಿ ಇತ್ತರು. ಸಂಸ್ಥೆಯ ಪರವಾಗಿ ಅವರನ್ನು ಗೌರವಿಸಲಾಯಿತು.

ಕೊಕ್ಕಡದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಕೃಷ್ಣ ಭಟ್, ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕ ಕೆ.ವಿನಾಯಕ ರಾವ್, ಕಾರ್ಯದರ್ಶಿ ಬಾಲಕೃಷ್ಣ, ಸ್ವಯಂಸೇವಕ ಮೈಲಾರಿ ಉಪಸ್ಥಿತರಿದ್ದರು. ಸೇವಾಭಾರತಿಯ ಅಕೌಂಟೆಂಟ್ ಅಕ್ಷತಾ ಸ್ವಾಗತಿಸಿ, ನಿರೂಪಿಸಿ, ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ.ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net