ಅಂತರ್ ಜಿಲ್ಲಾ ಕಳ್ಳರು ಪೊಲೀಸರ ಬಲೆಗೆ

inter state thives Arrested by Yallapur Police
Published on

ಯಲ್ಲಾಪುರ: ಪಟ್ಟಣದ ಶಾರದಾಗಲ್ಲಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಇನೊವಾ ಕಾರನ್ನು ಕಳವು ಮಾಡಿದ ಮೂವರು ಅಂತರ್ ಜಿಲ್ಲಾ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಂಗಳೂರಿನ ಮಹಮ್ಮದ್ ಸಾಹಿಲ್ ಶೇಖ್ ಮಹಮ್ಮದ್ ಅತ್ತಾವರ, ಮಹಮ್ಮದ್ ಮುಸ್ತಫಾ ಅಬ್ದುಲ್ ಹಮೀದ್ ಸುರತ್ಕಲ್, ಮಹಮ್ಮದ್ ಅಬ್ದುಲ್ ಹಮೀದ್ ಬಂಧಿತರು.

ಇವರು ಯಲ್ಲಾಪುರ ಶಾರದಾಗಲ್ಲಿಯ ಮೊಹಮ್ಮದ್ ಹುಸೇನ್ ಶಂಷುದ್ದೀನ್ ಶೇಖ್ ಅವರು ಮನೆಯ ಮುಂದೆ ನಿಲ್ಲಿಸಿಟ್ಟ ಕಾರನ್ನು ಏಪ್ರಿಲ್ 3ರಂದು ರಾತ್ರಿ ಅಪಹರಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೋಲಿಸರು ಅಪಹರಿಸಿದ ಇನ್ನೊವಾ ಕಾರು, ಕೃತ್ಯಕ್ಕೆ ಬಳಸಿದ ಫಾರ್ಚೂನರ್ ಕಾರನ್ನು ಜಪ್ತು ಮಾಡಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಎಸ್.ಪಿ. ವಿಷ್ಣುವರ್ಧನ, ಹೆಚ್ಚುವರಿ ಎಸ್.ಪಿ. ಜಯಕುಮಾರ, ಡಿ.ವೈ.ಎಸ್.ಪಿ. ಗಣೇಶ ಕೆ.ಎಲ್ ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ, ಪಿಎಸ್‌ಐಗಳಾದ ರವಿ ಗುಡ್ಡಿ, ಸುನೀಲ ಹಲ್ಲೊಳ್ಳಿ, ಮಂಜುನಾಥ ಪಾಟೀಲ, ಲತಾ ಕೆ.ಎನ್, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ಗಿರೀಶ ಲಮಾಣಿ, ಪರಶುರಾಮ ಕಾಳೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net