

ಬೆಳ್ತಂಗಡಿ: ಯಾವುದೇ ಭಾಷೆಯಲ್ಲಿ ಅದರದೇ ಆದ ಸಂಸ್ಕೃತಿ, ಸೌಂದರ್ಯ ಅಡಕವಾಗಿರುತ್ತದೆ. ನಾವು ಕುಟುಂಬದ ಸದಸ್ಯರೊಂದಿಗೆ ಮಾತೃಭಾಷೆಯಲ್ಲಿ ಯಾವುದೇ ಕಲಬೆರಕೆ ಇಲ್ಲದೆ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಾಹಿತಿ ಮೈಸೂರು ಅನಂತ ತಾಮ್ಹನ್ಕಾರ್ ಹೇಳಿದರು.
ಅಳದಂಗಡಿ ಸನಿಹದ ಸೂಳಬೆಟ್ಟು ಬರಯ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘದ ವತಿಯಿಂದ ನಡೆದ ಅಂತರ್‌ಜಿಲ್ಲಾ ಚಿತ್ಪಾವನಿ ಭಾಷಾ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಕವಯಿತ್ರಿ ಸಂಧ್ಯಾ ಪಾಳಂದ್ಯೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಗೋಷ್ಠಿಯಲ್ಲಿ 47 ಕವಿಗಳು ಸ್ವರಚಿತ ಕವನ ವಾಚಿಸಿದರು. ಚಂದ್ರಕಾಂತ ಗೋರೆ, ದೀಪಕ ಆಠವಳೆ, ವಿವೇಕ ಕೇಳ್ಕರ್ ಕಾರ್ಯಕ್ರಮ ನಿರೂಪಿಸಿದರು.