

* ರೇಷ್ಮೆಯಲ್ಲಿ ಲಾಭ ಕಂಡುಕೊಂಡ ಯುವ ರೈತ
* ಕೈ ಹಿಡಿದ ಹೈನುಗಾರಿಕೆ, ಹಣ್ಣಿನ ಗಿಡ
* ಸಾವಯವ ಗೊಬ್ಬರ ಬಳಕೆಗೆ ಒತ್ತು
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಮಾವು, ತೆಂಗು ತೋಟದ ಜತೆಗೆ ಸಮಗ್ರ ಕೃಷಿ, ರೇಷ್ಮೆ, ಹೈನುಗಾರಿಕೆ ಅವಲಂಬಿಸಿ ಕೃಷಿಯಲ್ಲಿ ಲಾಭದ ಹೆಜ್ಜೆ ಇಡುತ್ತಾ ಖುಷಿಯ ಬದುಕು ಕಟ್ಟಿಕೊಂಡಿರುವವರು ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಹೊಸದೊಡ್ಡಿ ಗ್ರಾಮದ ಯುವ ರೈತ ರಾಘವೇಂದ್ರ.
ನಾಟಿಕೋಳಿ, ಮೇಕೆ ಸಾಕಣೆ, ಹೈನುಗಾರಿಕೆ ಜತೆಗೆ ನಿಂಬೆ, ಚಕ್ಕೋತ, ಸ್ಟಾರ್ ಫ್ರೂಟ್ಸ್ ಹಣ್ಣಿನ ಗಿಡಗಳ ಕೃಷಿ ನಡೆಸುತ್ತಿದ್ದು, ಕೃಷಿಯಲ್ಲಿ ಲಾಭದತ್ತ ಮುಖ ಮಾಡಿ ಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ.
ತೆಂಗು, ಮಾವು ನೆಟ್ಟು ಸುಮ್ಮನಾಗದೆ ಖಾಲಿ ಜಾಗದಲ್ಲಿ ರೇಷ್ಮೆ ತೋಟ ನಿರ್ವಹಣೆ ಮಾಡುತ್ತಿದ್ದಾರೆ. ಇದರೊಂದಿಗೆ ರಾಗಿ, ಜೋಳ, ಜಾನುವಾರು ಮೇವು, ಮನೆ ಬಳಕೆಗೆ ತರಕಾರಿ ಬೆಳೆ ಬೆಳೆಯುತ್ತಿದ್ದಾರೆ. ತರಕಾರಿ ಬೆಳೆಗಳನ್ನು ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಬೆಳೆಯುತ್ತಿದ್ದು, ಉತ್ತಮ ಸಲು ಪಡೆಯುತ್ತಿದ್ದಾರೆ. ಕೃಷಿಗೆ ನೀರಿನ ಕೊರತೆಯಾಗದಂತೆ ಎರಡು ಬೋರ್‌ವೆಲ್ ಕೊರೆಸಿಕೊಂಡಿದ್ದಾರೆ.
ರಾಸಾಯನಿಕ ಗೊಬ್ಬರದ ಬದಲು ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರಕ್ಕೆ ಒತ್ತುಕೊಟ್ಟಿದ್ದು, ಉತ್ತಮ ತೋಟ ನಿರ್ವಹಣೆ ಮಾಡಿ ಕೃಷಿಯಲ್ಲಿ ಸಂತೋಷ ಕಾಣುತ್ತಿದ್ದಾರೆ.
ಬೋರ್‌ವೆಲ್‌ನಲ್ಲಿ ಹೆಚ್ಚಿನ ನೀರಿದ್ದರೂ ಮಿತ ಬಳಕೆ ಒತ್ತು ಕೊಟ್ಟು, ಹೈನುಗಾರಿಕೆ ಜಾನುವಾರು ಮೇವು, ಪಪ್ಪಾಯ ತೋಟ, ರೇಷ್ಮೆ ಹಣ್ಣಿನ ಬೆಳೆಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿಕೊಂಡು ವೈಜ್ಞಾನಿಕವಾಗಿ ರೀತಿಯಲ್ಲಿ ಸಲು ಪಡೆಯುತ್ತಿದ್ದಾರೆ.
ಪ್ರಮುಖವಾಗಿ ವರ್ಷದ 365 ದಿನವೂ ರೇಷ್ಮೆ ಬೆಳೆಯಲ್ಲಿ ತೊಡಗಿಕೊಂಡಿರುವ ರಾಘವೇಂದ್ರ ಎರಡು ಬ್ಯಾಚ್‌ನಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ರೇಷ್ಮೆ ಕೃಷಿಗೆ ನರೇಗಾ ಮತ್ತು ರೇಷ್ಮೆ ಇಲಾಖೆ ಸಹಾಯ‘ನ ಬಳಸಿಕೊಂಡು ಹನಿ ನೀರಾವರಿ ಯೋಜನೆ ಲಾ‘ ಪಡೆದುಕೊಂಡಿದ್ದಾರೆ.
ಪಪ್ಪಾಯ, ಹಣ್ಣಿನ ಗಿಡಗಳ ಬೆಳೆಗೆ ಮುಂದಾಗಿರುವ ಇವರು ಮೊದಲು ಸ್ವಲ್ಪ ಪ್ರಮಾಣದಲ್ಲಿ ಪಪ್ಪಾಯ, ನಿಂಬೆ, ಚಕ್ಕೋತ, ಸ್ಟಾರ್ ಪ್ರೋಟ್, ಸಪೋಟ, ಹಲಸು, ಬೆಟ್ಟದನೆಲ್ಲಿ, ವಾಲೆಟ್, ಸೀಬೆ ಇತರೆ ಹಣ್ಣಿನ ಗಿಡಗಳ ಬೆಳವಣಿಗೆ ಪ್ರಾರಂಭಿಸಿದ್ದಾರೆ. ಹಂತ-ಹಂತವಾಗಿ ತೋಟದ ಬೆಳೆ ಜತೆಗೆ ಜೇನು, ಮೆಣಸು ಕೃಷಿ ಅಡಕೆ ಬೆಳೆಯಲು ಮುಂದಾಗುತ್ತಿದ್ದೇನೆ ಎನ್ನುತ್ತಾರೆ ರಾಘವೇಂದ್ರ.
ಯುವ ರೈತ, ಹೊಸದೊಡ್ಡಿ
ರಾಘವೇಂದ್ರ
ಕೃಷಿಯಲ್ಲಿ ಖುಷಿ ಕಾಣಬೇಕು ಎಂದು ಕೃಷಿಗೆ ಇಳಿದವನು ನಾನು. ರೇಷ್ಮೆಯಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದೇನೆ. ಜತೆಗೆ ಹೈನುಗಾರಿಕೆ ಮಾಡುತ್ತಿದ್ದು, ಹಂತ-ಹಂತವಾಗಿ ತೋಟದ ಬೆಳೆ ಬೆಳೆಯಬೇಕು ಜೇನು ಸಾಕಣೆ ನಡೆಸಬೇಕೆಂಬ ಬಯಕೆ ಇದೆ. ಕೃಷಿಗೆ ಪರಿಶ್ರಮ ಮುಖ್ಯ. ನನ್ನ ಕುಟುಂಬ ಕೃಷಿಯಲ್ಲಿ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದು, ರೇಷ್ಮೆ ಇಲಾಖೆ ಮತ್ತು ಗ್ರಾಪಂ ನನ್ನ ಕೃಷಿಗೆ ಉತ್ತಮ ಸಹಕಾರ ನೀಡುತ್ತಿವೆ.
ರಾಘವೇಂದ್ರ ಪ್ರಗತಿಪರ ರೇಷ್ಮೆ ಕೃಷಿಕರಾಗಿದ್ದು, ಉತ್ತಮ ರೇಷ್ಮೆ ಬೆಳೆಗಾರರಾಗಿದ್ದಾರೆ. ಇಲಾಖೆ ಅವರಿಗೆ ವೈಜ್ಞಾನಿಕ ಪದ್ದತಿಯಲ್ಲಿ ರೇಷ್ಮೆ ಬೆಳೆ, ಅನುಸರಿಸುವ ಕೃಷಿ ತೋಟ ನಿರ್ವಹಣೆ ಔಷ‘ ಸಿಂಪಡಣೆ ಬೇಸಾಯ ಕ್ರಮಗಳ ಬಗ್ಗೆ ಇಲಾಖೆ ಮಾರ್ಗ ದರ್ಶನ ಮತ್ತು ಸಹಕಾರ ನೀಡುತ್ತದೆ. ಜತೆಗೆ ರೇಷ್ಮೆ ಇಲಾಖೆಯಲ್ಲಿ ಸಕಾಲಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ತಿಳಿಸಿ ಅವರ ಕೃಷಿಗೆ ಉತ್ತೇಜನ ನೀಡುತ್ತಿದೆ.
ಉಮೇಶ್
ಸಹಾಯಕ ನಿರ್ದೇಶಕ, ರೇಷ್ಮೆ ಇಲಾಖೆ, ರಾಮನಗರ