ಸಮಗ್ರ ಕೃಷಿ ಸಮೃದ್ಧ ಬದುಕು

agri
Published on

ಖಾಸಗಿ ಉದ್ಯೋಗ ತೊರೆದು ವ್ಯವಸಾಯದತ್ತ ಮುಖ

 ಚನ್ನಪಟ್ಟಣ: ಕೃಷಿ ಎಂದರೆ ಸಕಾರಾತ್ಮಕ ವಿಚಾರಕ್ಕಿಂತ ನಕಾರಾತ್ಮಕ ಮಾತುಗಳೇ ಹೆಚ್ಚು. ಇದರ ಮಧ್ಯೆಯೂ ಸಹಸ್ರಾರು ಮಂದಿ ಕೃಷಿಯಲ್ಲೆ ಸಾಧನೆ ಮಾಡಿರುವವರನ್ನು ಕಾಣಬಹುದು. ಅಂಥವರ ಸಾಲಿನಲ್ಲಿ ತಾಲೂಕಿನ ಮುದಗೆರೆ ಗ್ರಾಮದ ಎಂ.ಎನ್​.ಸುರೇಶ್​ (ಮುದಗೆರೆ ಸುರೇಶ್​) ಒಬ್ಬರು.

ಎಂ.ಎನ್​. ಸುರೇಶ್​ ಕೃಷಿಯಲ್ಲೆ ಬದುಕು ಕಟ್ಟಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಭೂ ತಾಯಿಯನ್ನು ನಂಬಿದರೆ ಕೈ ಬಿಡುವುಲ್ಲಂಬ ನಂಬಿಕೆಯಿಂದ ಹಲವು ವರ್ಷಗಳಿಂದ ಭೂ ತಾಯಿ ನೆಚ್ಚಿಕೊಂಡು ಸಮೃದ್ಧ ಬದುಕು ಕಟ್ಟಿಕೊಂಡಿದ್ದಾರೆ.

ಸುರೇಶ್​ಗೆ ಐದು ಎಕರೆ ಭೂಮಿಯಿದೆ. ಬೇರೆಯವರಿಂದ ಮೂರು ಎಕರೆ ಜಮೀನು ಭೋಗ್ಯಕ್ಕೆ ಪಡೆದು ವಿವಿಧ ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದಾರೆ. ಐದು ಎಕರೆಯಲ್ಲಿ ತೆಂಗು, ಅಡಕೆ ಹಾಗೂ ರೇಷ್ಮೆ ಬೆಳೆದಿದ್ದು, ಭೋಗ್ಯದ ಭೂಮಿಯಲ್ಲಿ ಭತ್ತ, ರಾಗಿ, ಟೊಮ್ಯಾಟೊ ಸೇರಿ ವಿವಿಧ ತರಕಾರಿ ಹಾಗೂ ಅಲಂಕಾರಿಕ ಹೂವುಗಳಾದ ಚೈನಾ ಫಾಮ್​, ಕಾಮಿನಿ ಹೂವು ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಕೃಷಿ ಸೆಳೆತ! ಪಿಯುಸಿ ಅನುರ್ತೀಣವಾದ ಬಳಿಕ ಸುರೇಶ್​ ಕೆಲದಿನಗಳವರೆಗೂ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗ ಮಾಡುತ್ತಾರೆ. ಆದರೆ, ಬಾಲ್ಯದಿಂದಲೂ ಕೃಷಿಯೊಂದಿಗಿನ ಅವರ ಸೆಳೆತ ಬೆಂಗಳೂರು ಮಹಾನಗರದಲ್ಲಿ ಇರಲು ಅವಕಾಶ ನೀಡುವುದಿಲ್ಲ. ವಾಪಸ್​ ಊರಿಗೆ ಬಂದು ತಂದೆ ಹಾಗೂ ಕುಟುಂಬಸ್ಥರ ಜತೆ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ವ್ಯವಸಾಯಕ್ಕೆ ಅರ್ಪಿಸಿಕೊಂಡಿದ್ದಾರೆ. ಪ್ರತಿನಿತ್ಯವೂ ಕನಿಷ್ಠ ಐದು ಮಂದಿ ಕೃಷಿ ಕಾರ್ಮಿಕರಿಗೆ ಕಾಯಂ ಉದ್ಯೋಗ ನೀಡಿರುವ ಅವರ ಕೃಷಿ ಕಾರ್ಯಕ್ಕೆ ಪತ್ನಿ ಸುಜಾತಾ ಸಾಥ್​ ನೀಡುತ್ತಿದ್ದಾರೆ. ವಾರ್ಷಿಕ ಹತ್ತು ಲಕ್ಕೂ ಹೆಚ್ಚು ಆದಾಯ ರೇಷ್ಮೆ ಬೆಳೆ ನಿರಂತರವಾಗಿದ್ದು, ವರ್ಷಪೂರ್ತಿ ರೇಷ್ಮೆ ಬೆಳೆಯುತ್ತಾರೆ. ಸುಮಾರು 250 ಮೊಟ್ಟೆಯ ರೇಷ್ಮೆಹುಳ್ಳುಗಳನ್ನು ಎರಡು ಬ್ಯಾಚ್​ನಲ್ಲಿ ಸಾಕುತ್ತಾರೆ. ಇದಕ್ಕಾಗಿ ತೋಟದ ಬಳಿ ಪ್ರತ್ಯೇಕವಾದ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ರೇಷ್ಮೆ ಇವರ ಮೂಲ ಆದಾಯವಾಗಿದ್ದು, ಇದುವರೆಗೂ ಲಾಂತರ ರೂ. ಇದರಿಂದ ಸಂಪಾದಿಸಿದ್ದಾರೆ. 250 ತೆಂಗಿನಮರಗಳು ಆದಾಯದ ಮೂಲವಾಗಿವೆ. ಇದಲ್ಲದೇ ಸುಮಾರು ನಾಲ್ಕು ವರ್ಷದ ಎರಡೂವರೆ ಸಾವಿರ ಅಡಕೆ ಗಿಡಗಳಿದ್ದು, ಇದರಿಂದಲೂ ಈ ವರ್ಷದಿಂದ ಆದಾಯದ ನಿರೀೆಯಲ್ಲಿದ್ದಾರೆ. ಅಲ್ಲದೇ ಜಮೀನಿನಲ್ಲಿ ಸೀಬೆ, ಸಪೋಟ ಸೇರಿ ವಿವಿಧ ಬಗೆಯ ನೂರಾರು ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ರೇಷ್ಮೆ ಕೃಷಿಯ ಸಾಧನೆಗೆ ರೇಷ್ಮೆ ಇಲಾಖೆ ಪ್ರಗತಿಪರ ರೈತ ಪ್ರಶಸ್ತಿ ನೀಡಿ ಗೌರವಿಸಿದೆ. ರಾಜಕಾರಣದಲ್ಲೂ ಸೈ! ರೈತ ಸುರೇಶ್​ ಕೃಷಿಕನಾಗುವ ಜತೆಗೆ, ರಾಜಕಾರಣದಲ್ಲೂ ತೊಡಗಿಸಿಕೊಂಡಿದ್ದಾರೆ. ಕಳೆದ ಅವಧಿಯಲ್ಲಿ ತಾಪಂ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಒಟ್ಟಾರೆ, ಕೃಷಿಯಲ್ಲೆ ಬದುಕು ಕಟ್ಟಿಕೊಂಡು ಉತ್ತಮ ಜೀವನ ತನ್ನದಾಗಿಸಿಕೊಂಡಿದ್ದಾರೆ.

ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಸೇರಿ ನನ್ನೆಲ್ಲ ಬೆಳವಣಿಗೆಗೂ ಕೃಷಿಯೇ ಆಧಾರ. ಈ ಹಿಂದೆ ತಂದೆ ರೇಷ್ಮೆ ಬೆಳೆಯುತ್ತಿದ್ದರು. ನಾನು ಅದನೇ ಮುಂದುವರಿಸಿಕೊಂಡು ಬಂದೆ. ರೇಷ್ಮೆ ನನ್ನ ಆರ್ಥಿಕ ಬೆನ್ನೆಲುಬು. ಇದರೊಂದಿಗೆ, ಎಲ್ಲ ಕೃಷಿಯೂ ನಮ್ಮನ್ನು ಕೈಹಿಡಿದವು. ಭೂ ತಾಯಿಯನ್ನು ನಂಬಿದರೆ ಅದು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಬಿಳಿರೇಷ್ಟೇ ಅತ್ಯಂತ ಲಾಭದಾಯಕ ಬೆಳೆ. > ಮುದಗೆರೆ ಸುರೇಶ್​, ರೈತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net