2 ಲಕ್ಷ ರೂ.ವಿಮೆ ಹಣ ವಿತರಣೆ

23Rajesh6
Published on

ಚಾಮರಾಜನಗರ: ತಾಲೂಕಿನ ಹೊಂಗನೂರು ಗ್ರಾಮದ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಮೆ ಮಾಡಿಸಿದ ಹೇಮಂತ್ ಕುಮಾರ್ ಆಕಾಲಿಕ ಮರಣ ಹೊಂದಿದ್ದು, ಅವರ ಕುಟುಂಬದವರಿಗೆ 2 ಲಕ್ಷ ರೂ.ವಿಮೆಯ ಹಣವನ್ನು ಬ್ಯಾಂಕಿನ ವ್ಯವಸ್ಥಾಪಕ ಅವಿನೀಶ್ ಕುಮಾರ್ ಪಠಾಕ್ ವಿತರಿಸಿದರು.

ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸುರಕ್ಷಾ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ಎಂಬ ಎರಡು ವಾರ್ಷಿಕ ವಿಮಾ ಯೋಜನೆ ಜಾರಿಗೆ ತಂದಿದ್ದು, ಇದು ಅತಿ ಕಡಿಮೆ ಹಣದಲ್ಲಿ ವಾರ್ಷಿಕವಾಗಿ 20 ರೂ. ಹಾಗೂ 436 ರೂ. ಗಳ ವಿಮೆಯ ಕಂತಿನ ಹಣವನ್ನು ಪಾವತಿಸಿದರೆ 2 ಲಕ್ಷ ರೂ.ಪರಿಹಾರ ಪಡೆಯಬಹುದಾಗಿದೆ ಎಂದರು. ಬ್ಯಾಂಕಿನ ಹಣಕಾಸು ವಿಭಾಗದ ಸಂಜಯ್ ಇಂಟಿಗ್ರಾ, ಕಂಪನಿಯ ಸಿದ್ದರಾಜು, ಸುನೀಲ್, ಬಸವನಾಯಕ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net