

ಉಪ್ಪಳ: ಕಾಸರಗೋಡು ಕುಟುಂಬಶ್ರೀ ಜಿಲ್ಲಾ ಮಿಷನ್, ಮಂಗಲ್ಪಾಡಿ ಸಿ.ಡಿ.ಎಸ್.ನ ನೇತೃತ್ವದಲ್ಲಿ ಆರ್ಥಿಕ ಸಾಕ್ಷರತಾ ಅಭಿಯಾನ ಮತ್ತು ಪ್ರಧಾನಮಂತ್ರಿ ವಿಮಾ ಅಭಿಯಾನದ ಕ್ಲಪ್ತಂ ಕಾರ್ಯಕ್ರಮ ಮುಳಿಂಜ ಜಿ.ಎಲ್.ಪಿ. ಶಾಲೆಯಲ್ಲಿ ನಡೆಯಿತು.
ಕೆನರಾ ಬ್ಯಾಂಕ್ ಉಪ್ಪಳ ಶಾಖೆಯ ಪ್ರಬಂಧಕ ಅಮರ್ ಎನ್.ವಿ. ಪ್ರಧಾನಮಂತ್ರಿ ಜೀವವಿವಾ ಯೋಜನೆಗಳ ಬಗ್ಗೆ ವಾಹಿತಿ ನೀಡಿದರು.
ಎಫ್.ಎನ್.ಎಚ್.ನ ಎಗ್ರಿ ನ್ಯೂಟ್ರಿ ಗಾರ್ಡನ್ ತರಕಾರಿ ಕೃಷಿಯ ಬಗ್ಗೆ ತರಬೇತಿ ನೀಡಿ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಹಿವಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ, ಮಂಗಲ್ಪಾಡಿಯ ಅಶ್ವತಿ, ಶಾಲಿನಿ, ರಂಜಿನಿ ಉಪಸ್ಥಿತರಿದ್ದರು. ಗ್ರಾ.ಪಂ. ಸಿ.ಡಿ.ಎಸ್. ಅಧ್ಯಕ್ಷೆ ಸಫೀನಾ ಸ್ವಾಗತಿಸಿದರು. ಕುಟುಂಬಶ್ರೀ ಉಪಾಧ್ಯಕ್ಷೆ ನಸೀಮಾ ವಂದಿಸಿದರು.