ಬಿರಿಯಾನಿ ಜಾಹೀರಾತಲ್ಲಿ ಸಾಧು-ಸಂತರಿಗೆ ಅವಮಾನ; ಹೋಟೆಲ್ ಮಾಲೀಕ ನಿಯಾಜ್ ಬಂಧನ

Hindu
ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದ ಹಿಂದುಪರ ಹೋರಾಟಗಾರರು.
Published on

ಬೆಳಗಾವಿ: ಬಿರಿಯಾನಿ ಜಾಹೀರಾತಿನಲ್ಲಿ ಸಾಧು-ಸಂತರಿಗೆ ಅವಮಾನ ಆಗುವ ರೀತಿಯಲ್ಲಿ ಪ್ರಕಟಿಸಿರುವ ಹೊಟೇಲ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಬೆಳಗಾವಿಯ ನಿಯಾಜ್ ಹೋಟೆಲ್ ಮಾಲೀಕ ನಿಯಾಜ್​ ಸೌದಾಗರ್ ಬಂಧಿತ ಉದ್ಯಮಿ.

ಬಿರಿಯಾನಿ ಕುರಿತಂತೆ ನಿಯಾಜ್​ ಹೋಟೆಲ್​ನಿಂದ ಬುಧವಾರವಷ್ಟೇ ಜಾಹೀರಾತೊಂದನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಸಾಧು-ಸಂತರಿಗೆ ಅವಮಾನ ಮಾಡಲಾಗಿದೆ ಎಂದು ಹಿಂದುಪರ ಹೋರಾಟಗಾರರು ಆರೋಪಿಸಿದ್ದರು. ಬಿರಿಯಾನಿ ಜಾಹೀರಾತಿನ ಮೂಲಕ ಸಾಧು-ಸಂತರನ್ನು ಅವಮಾನಿಸಿರುವ ಹೋಟೆಲ್​ ಮಾಲೀಕರ ವಿರುದ್ಧ ಕ್ರಮಜರುಗಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.

ಹಿಂದುಪರ ಕಾರ್ಯಕರ್ತರ ದೂರಿನ ಮೇರೆಗೆ ಮಾರ್ಕೆಟ್​ ಠಾಣೆ ಪೊಲೀಸರು ನಿಯಾಜ್​ ಹೋಟೆಲ್ ಮಾಲೀಕರನ್ನು ವಶಕ್ಕೆ ಪಡೆದಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಸಾಧು-ಸಂತರ ಅವಮಾನದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದೂ ಹಿಂದುಪರ ಹೋರಾಟಗಾರರು ಆಗ್ರಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net