

ಸಿರವಾರ: ಪಟ್ಟಣದ ಚುಕ್ಕಿ ರುದ್ರಮ್ಮ ಉಮಾಪತೆಪ್ಪ ಕಲ್ಯಾಣ ಮಂಟಪದ ಆವರಣದಲ್ಲಿರುವ ಏಳು ಮಕ್ಕಳ ತಾಯಮ್ಮ ದೇವಿ ದೇವಸ್ಥಾನದಲ್ಲಿ ಗುರುವಾರ ನೂತನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಇದನ್ನೂ ಓದಿ:ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಸಂಸ್ಕೃತಿಯ ಪ್ರತೀಕ
ನಗರದ ಬನ್ನಿ ಮಹಾಕಾಳಿ ದೇವಸ್ಥಾನದಿಂದ ದೇವದುರ್ಗ ರಸ್ತೆಯ ನೂತನ ದೇವಸ್ಥಾನದವರೆಗೆ ಕುಂಭ-ಕಳಸ ಹಾಗೂ ವಿವಿಧ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು. ಯರಮರಸ್ ಚನ್ನಬಸವ ತಾತ, ಪ್ರಮುಖರಾದ ಚುಕ್ಕಿ ಸೂಗಪ್ಪ ಸಾಹುಕಾರ, ಅರಕೇರಿ ಮಲ್ಲಪ್ಪ ಸಾಹುಕಾರ, ಎನ್.ಉದಯಕುಮಾರ, ಶಿವಾನಂದ ಚುಕ್ಕಿ, ನಿಂಬಯ್ಯ ಸ್ವಾಮಿ, ವೀರಭದ್ರಪ್ಪ ಬಡಿಗೇರ, ಪಂಪಣ್ಣ ಸಾಹುಕಾರ ಇತರರಿದ್ದರು.