

ಬೆಳಗಾವಿ: ನಿಮ್ಮೆಲ್ಲರ ಸಹಕಾರ, ಪ್ರಾರ್ಥನೆಯ ಲವಾಗಿ ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ತಾಲೂಕಿನ ತುರಮುರಿ ಗ್ರಾಮದಲ್ಲಿ ಈಚೆಗೆ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಕೃತಿಯ ಪ್ರತೀಕವಾಗಿ ರಾಜಹಂಸಗಡದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಅಲ್ಲಿ ಈಗ ವಿದೇಶದಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಸಾರ್ಥಕವಾಗಿದೆ ಎಂದರು.
ಯುವರಾಜ್ ಕದಂ, ಜಯವಂತ ಬಾಳೇಕುಂದ್ರಿ, ಕಾಂಗ್ರೆಸ್ ಯುವ ಮುಖಂಡ ಮಣಾಲ್ ಹೆಬ್ಬಾಳ್ಕಕರ್, ಸಿದ್ದಪ್ಪ ಕಾಂಬಳೆ, ಅಶೋಕ ಚೌಗುಲೆ, ವೈಶಾಲಿ ಖಂಡೇಕರ್, ನಾಗರಾಜ ಜಾಧವ, ಆರ್.ಎಂ.ಚೌಗುಲೆ, ರವಿ ಕೊಕಿತಕರ್, ಚಂದ್ರಕಾಂತ ಜಾಧವ, ರಾಜು ಜಾಧವ, ಎನ್.ಬಿ.ಖಂಡೇಕರ್, ಚಾಂಗದೇವ್ ಬೆಳಗಾಂವಕರ್ ಇತರರಿದ್ದರು.