ಮಾರಾಳಿ ಕ್ಷೇತ್ರದಲ್ಲಿ ಬ್ರಹ್ಮಬೈದರ್ಕಳ ಬಿಂಬ ಪ್ರತಿಷ್ಠಾಪನೆ

kon june 04(4)
Published on

ಕೊಕ್ಕರ್ಣೆ: ನಾಲ್ಕೂರು ಗ್ರಾಮದ ವಾರಾಳಿಯಲ್ಲಿ ನೂತನ ಶಿಲಾಮಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಶ್ರೀ ಬ್ರಹ್ಮಬೈದರ್ಕಳ, ಶ್ರೀ ಶಿವರಾಯ ಸ್ವಾಮಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವ ಅಂಗವಾಗಿ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರ ನಡೆಯಿತು.

ಮಾರಾಳಿ ಬಾಲಕೃಷ್ಣ ಕರಬ ನೇತೃತ್ವದಲ್ಲಿ ಬೆಳಗ್ಗೆ ಬ್ರಹ್ಮಬೈದರ್ಕಳ ಬಿಂಬ ಪ್ರತಿಷ್ಠಾಪನೆ, ಪರಿವಾರ ದೈವಗಳ ಪ್ರತಿಷ್ಠಾಪನೆ, ಕಲಾತತ್ವ ಹೋಮ, ಕಲಶಾಧಿವಾಸ ಹೋಮ, ಬ್ರಹ್ಮಕಲಶಾಭಿಷೇಕ ಮಹಾಪೂಜೆ ನರೆವೇರಿದವು.

ಸಂಜೆ ದುರ್ಗಾಪರಮೇಶ್ವರಿ ದೇವರ ಸನ್ನಿಧಿಯಲ್ಲಿ ಸ್ಥಾನ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಮತ್ತು ರಾಕ್ಷ್ನೋ ಹೋಮ, ವಾಸ್ತುಪೂಜಾ ಬಲಿ, ವನದುರ್ಗಾ ಹೋಮ, ಪ್ರತಿಷ್ಠಾಧಿವಾಸ ಹೋಮ, ಬಿಂಬ ಶುದ್ಧಿ, ಕಲಶ ಅಧಿವಾಸ ಪೂಜೆ ನೆರವೇರಿದವು. ಅನುವಂಶಿಕ ಮೋಕ್ತೇಸರ ವಿಠಲ ಶೆಟ್ಟಿ ವಾರಾಳಿಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ವಾರಾಳಿಮನೆ, ಗೌರವಾಧ್ಯಕ್ಷ ಕಿಶೋರ್ ಕುವಾರ್ ಹೆಗ್ಡೆ, ಸದಾನಂದ ಶೆಟ್ಟಿ, ಪ್ರಭಾಕರ ಶೆಟ್ಟಿ ವಾರಾಳಿ ಒಳಬೈಲು, ಎಂ.ಜಯರಾಮ ಶೆಟ್ಟಿ ವಾರಾಳಿಮನೆ, ಬ್ರಹ್ಮಬೈದರ್ಕಳ ಗರಡಿಯ ಪೂಜಾರಿ ಕೃಷ್ಣ ಪೂಜಾರಿ, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಅರ್ಚಕರು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net