ಬಚ್ಚಪ್ಪು ಅಂಗನವಾಡಿಗೆ ಮೇಲ್ಛಾವಣಿ ಅಳವಡಿಕೆ

anganavadi
ಅಂಗನವಾಡಿ ಕೇಂದ್ರದ ಮುಂಭಾಗಕ್ಕೆ ಇಂಟರ್ಲಾಕ್ ಹಾಗೂ ಮೇಲ್ಛಾವಣಿ ನಿರ್ಮಿಸಿರುವುದು.
Published on

ಹೆಬ್ರಿ: ಬಚ್ಚಪ್ಪು ಹೆಬ್ರಿಯ ಶ್ರೀ ದುರ್ಗಾಪರಮೇಶ್ವರಿ ಗದ್ದುಗೆ ಭಜನಾ ಮಂಡಳಿ, ಯುವ ಕಿರಣ ಫ್ರೆಂಡ್ಸ್ ಹಾಗೂ ಗ್ರಾಮಸ್ಥರ ನೆರವಿನಿಂದ ಬಚ್ಚಪ್ಪು ಅಂಗನವಾಡಿ ಕೇಂದ್ರದ ಮುಂಭಾಗಕ್ಕೆ ಇಂಟರ್ಲಾಕ್ ಹಾಗೂ ಮೇಲ್ಛಾವಣಿ ಅಳವಡಿಸಲಾಯಿತು.

ಸುಮಾರು 1 ಲಕ್ಷ ರೂ. ವೆಚ್ಚ ತಗುಲಿದ್ದು, ಅಧ್ಯಕ್ಷ ರಮೇಶ್ ನಾಯ್ಕ ಮುರ್ಮುಡಿ ನೇತೃತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಗದ್ದುಗೆ ಭಜನಾ ಮಂಡಳಿ ಸದಸ್ಯರು ಇಂಟರ್ಲಾಕ್ ಹಾಗೂ ಮೇಲ್ಛಾವಣಿ ಅಳವಡಿಕೆಗೆ ಶ್ರಮಿಸಿದರು. ಪ್ರಸಾದ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಭಜನಾ ಮಂಡಳಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net