ಗುಂಡಿಮಾಳದ ಅಡ್ಡರಸ್ತೆಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ

ಗುಂಡಿಮಾಳದ ಅಡ್ಡರಸ್ತೆಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ
Published on

ಹನೂರು; ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ಶುಕ್ರವಾರ ಅರಣ್ಯ ಇಲಾಖೆ ತಾಲೂಕಿನ ಗುಂಡಿಮಾಳದ ಅಡ್ಡರಸ್ತೆಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಿದೆ.

ಈ ಭಾಗದಲ್ಲಿ ಕಳೆದ ಹಲವು ತಿಂಗಳ ಹಿಂದೆ ಕಾಡಾನೆಗಳು ಆಗಮಿಸಿ ಮುಖ್ಯ ರಸ್ತೆಯಲ್ಲೇ ನಿಲ್ಲುತ್ತಿದ್ದವು. ಇದರಿಂದ ವಾಹನ ಸವಾರರು ಹಾಗೂ ಜನರು ಆತಂಕಕ್ಕೆ ಒಳಗಾಗುತ್ತಿದ್ದರು. ಜತೆಗೆ ಜನರ ಮೇಲೆ ದಾಳಿ ನಡೆಸಲು ಸಹ ಮುಂದಾಗುತ್ತಿದ್ದವು. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತುಂಬ ತೊಂದರೆ ಅನುಭವಿಸುತ್ತಿದ್ದರು. ಕಾಡಾನೆಗಳು ರಸ್ತೆ ಬಾರದ ರೀತಿಯಲ್ಲಿ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಗತ್ಯ ಮುತುವರ್ಜಿ ವಹಿಸಿ ಹುಣಸೇಪಾಳ್ಯ ಮುಖ್ಯರಸ್ತೆ ಬದಿಯಲ್ಲಿನ ಗುಂಡಿಮಾಳಕ್ಕೆ ತೆರಳುವ ಅಡ್ಡರಸ್ತೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಿದೆ. ಕಾಮಗಾರಿಯು ಶನಿವಾರ ಸಂಜೆಗೆ ಪೂರ್ಣಗೊಳ್ಳಲಿದೆ. ಆದ್ದರಿಂದ ಗುಂಡಿಮಾಳಕ್ಕೆ ತೆರಳುವ ಸಾರ್ವಜನಿಕರು ಒಡೆಯರಪಾಳ್ಯ ಎಸ್‌ಬಿಐ ಬ್ಯಾಂಕ್ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net