ವೈಜ್ಞಾನಿವಾಗಿ ನಲ್ಲಿ ಪೈಪ್ ಅಳವಡಿಕೆ ಶುರು

Rmgm-Ph-01-Drinking Water Suply Pipe Varadi Parinama News Photo- 7-1-2025
Published on

ರಾಮನಗರ

ನಗರದ ಫುಟ್‌ಪಾತ್ ಮೇಲೆ ಮನಸೋಇಚ್ಛೆ 24/7 ಕಾವೇರಿ ನೀರು ಕೊಳಾಯಿ ಸಂಪರ್ಕ ಕಾಮಗಾರಿ ನಡೆಸುತ್ತಿದ್ದ ಜಲಮಂಡಳಿ ಕೊನೆಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದು ಜನಸಾಮಾನ್ಯರ ಓಡಾಟಕ್ಕೆ ಸಮಸ್ಯೆಯಾಗದಂತೆ ಕೆಲಸ ನಿರ್ವಹಿಸುತ್ತಿದೆ.

ಕಾವೇರಿ ನೀರು ಕೊಳಾಯಿ ಹೊಸ ಸಂಪರ್ಕಗಳನ್ನು ಜಲಮಂಡಳಿ ಫುಟ್‌ಪಾತ್ ಮೇಲೆ ಅವೈಜ್ಞಾನಿಕವಾಗಿ ಸಂಪರ್ಕ ಕಲ್ಪಿಸುತ್ತಿದೆ. ರಾಮನಗರದ ಬಲಮುರಿ ಗಣೇಶ ದೇವಾಲಯದ ಮುಖ್ಯರಸ್ತೆ ಪಾದಚಾರಿ ಮಾರ್ಗದಲ್ಲಿ ಜನರು ಓಡಾಡುತ್ತಾರೆ. ಇದು ಜನನಿಬಿಡ ಸ್ಥಳವಾಗಿದೆ. ಈ ಮಾರ್ಗದ ಮನೆಗಳಿಗೆ ಮನಸ್ಸಿಗೆ ಬಂದಂತೆ ಅವೈಜ್ಞಾನಿಕವಾಗಿ ುಟ್‌ಪಾತ್‌ನಲ್ಲಿ ನಗರಸಭೆ ಹಾಕಿದ್ದ ಟೈಲ್ಸ್‌ಗಳ ಮೇಲೆಯೇ ಕೊಳಾಯಿ ಸಂಪರ್ಕ ನೀಡುತ್ತಿರುವ ಬಗ್ಗೆ ಜ.4ರಂದು

ವಿಜಯವಾಣಿ ಸಂಚಿಕೆಯಲ್ಲಿ ‘ರಾಮನಗರದಲ್ಲಿ ನಲ್ಲಿ ಸಂಪರ್ಕ ಅಧ್ವಾನ’ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡ ಜಲಮಂಡಳಿ ಹಾಗೂ ನಗರಸಭೆ ಅಳವಡಿಸಿದ್ದ ಪೈಪ್‌ಗಳನ್ನು ತೆಗೆದು ಫುಟ್ ಪಾತ್ ಮೇಲೆ ಹಾಕಿದ್ದ ಟೈಲ್ಸ್‌ಗಳನ್ನು ಯಂತ್ರದ ಸಹಾಯದಿಂದ ಕತ್ತರಿಸಿ ಮಧ್ಯದಲ್ಲಿ ಪೈಪ್‌ಗಳನ್ನು ಅಳವಡಿಸಿ ಸಾರ್ವಜನಿಕ ಓಡಾಟಕ್ಕೆ ಸಮಸ್ಯೆಯಾಗದಂತೆ ಅನುವು ಮಾಡಿಕೊಡುವ ಕಾರ್ಯ ಕೈಗೊಂಡಿದೆ.

ವರದಿ ಬಿತ್ತರಿಸಿ ಸಮಸ್ಯೆ ಬಹುಬೇಗನೆ ಬಗೆಹರಿಸಲು ಸಹಕರಿಸಿದ ವಿಜಯವಾಣಿ ಪತ್ರಿಕೆಗೆ ಸ್ಥಳೀಯ ನಿವಾಸಿ ಚೇತನ್‌ಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net