ಕುಮಾರಧಾರಾ ಸೇತುವೆಗೆ ಬ್ಯಾರಿಕೇಡ್ ಅಳವಡಿಕೆ

bridge
ಬ್ಯಾರಿಕೇಡ್ ಅಳವಡಿಸಿದ ಪಂಚಾಯತ್‌ಪಿಡಿಒ ವಿಲ್‌ಫ್ರೆಡ್ ಲಾರೆನ್ಸ್ ರೋಡ್ರಿಗಸ್ ನೇತೃತ್ವದ ತಂಡ.
Published on

ಉಪ್ಪಿನಂಗಡಿ : ಇತ್ತೀಚಿನ ದಿನಗಳಲ್ಲಿ ಕಳ್ಳಕಾಕರ ಕೈ ಚಳಕದಿಂದಾಗಿ ಸುದ್ದಿಯಾಗಿದ್ದ ಉಪ್ಪಿನಂಗಡಿಯ ಆಂಗ್ಲರ ಕಾಲದ ಕುಮಾರಧಾರಾ ಸೇತುವೆಯಲ್ಲಿ ಸುರಕ್ಷತಾ ಕಾರಣಕ್ಕೆ ವಾಹನ ಸಂಚಾರ ಹಾಗೂ ಜನ ಸಂಚಾರವನ್ನು ನಿಷೇಧಿಸಿ ದ.ಕ ಜಿಲ್ಲಾಧಿಕಾರಿಯವರ ಆದೇಶದನ್ವಯ ಬ್ಯಾರಿಕೇಡ್ ಅಳವಡಿಸಲಾಗಿದೆ.

88 ವರ್ಷ ಹಳೆಯದಾದ ಸೇತುವೆಯ ಎರಡೂ ಪಾರ್ಶ್ವದಲ್ಲಿ ಕಬ್ಬಿಣದ ಸುರಕ್ಷಾ ವ್ಯವಸ್ಥೆಯಲ್ಲಿ ಅಳವಡಿಸಲಾದ ರಾಡ್‌ಗಳನ್ನು ಕಳ್ಳರು ಕದಿಯುತ್ತಿದ್ದು, ಸೇತುವೆಯ ಕೆಲವೆಡೆ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು. ಹಳೆಯ ಸೇತುವೆಯನ್ನು ನೋಡುವ ಕುತೂಹಲಿಗರ ಸಂಖ್ಯೆ ಹೆಚ್ಚಾಗಿ ಸೇತುವೆಯಲ್ಲಿ ನಿಂತು ಸೆಲ್ಫಿ ತೆಗೆಯುವ ವಿದ್ಯಾಮಾನಗಳು ಹೆಚ್ಚಾದವು. ಮಾತ್ರವಲ್ಲದೆ ಕತ್ತಲಾಗುತ್ತಿದ್ದಂತೆಯೇ ಭಾರಿ ಸಂಖ್ಯೆಯ ಜನರು ಈ ಸೇತುವೆಯಲ್ಲಿ ಜಮಾಯಿಸಿ ಮೀನಿಗೆ ಗಾಳ ಹಾಕುತ್ತಿದ್ದರು. ಈ ಬಗ್ಗೆ ಯಾರೋ ಫೋಟೋ ತೆಗೆದು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದ ಹಿನ್ನೆಲೆಯಲ್ಲಿ ಸೇತುವೆಯಲ್ಲಿ ವಾಹನ ಸಂಚಾರ ಹಾಗೂ ಜನ ಸಂಚಾರವನ್ನು ನಿಷೇಧಿಸಿ ಅಗತ್ಯ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ ಗುರುವಾರ ಉಪ್ಪಿನಂಗಡಿ ಪಂಚಾಯಿತಿ ಅಭಿವೃದ್ಧಿ ಅಬಕಾರಿ, ಪಂಚಾಯಿತಿ ಸದಸ್ಯರು, ಗೃಹರಕ್ಷಕ ದಳದ ನೆರವಿನೊಂದಿಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net