

ಮಂಗಳೂರು : ಮುಡಾ ವಿಚಾರದಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಮುಖ್ಯಮಂತ್ರಿ ಅವರದು ತಪ್ಪಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಮೂರು ಎಕರೆ ಜಾಗ ಅತಿಕ್ರಮಣ ಮಾಡಿ ಮುಡಾ ಲೇಔಟ್ ನಿರ್ಮಿಸಿದೆ. ಭೂ ಸ್ವಾಧೀನ ಆಗದ ಜಾಗದಲ್ಲಿ ಲೇಔಟ್ ಕಟ್ಟಿದ್ದಾರೆ. ಮುಖ್ಯಮಂತ್ರಿ ಆದ ತಕ್ಷಣ ಅವರು ತಮ್ಮ ಜಾಗ ಬಿಟ್ಟು ಕೊಡಬೇಕಾ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಮುಖ್ಯಮಂತ್ರಿ ಮೇಲಿನ ಮುಡಾ ನಿವೇಶನ ಕುರಿತ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲೇ ಇದು ಅಗಿರೋದು. ಮುಖ್ಯಮಂತ್ರಿ ಆದ ತಕ್ಷಣ ಅವರು ಅವರ ಜಾಗ ಬಿಟ್ಟು ಕೊಡಬೇಕಾ? ನಿಮ್ಮ ಜಾಗ ಯಾರಾದ್ರೂ ಅತಿಕ್ರಮಣ ಮಾಡಿದ್ರೆ ಬಿಡುತ್ತೀರಾ? ಅದು ಅವರ ಪತ್ನಿಯ ಜಾಗ, ಮುಡಾ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದೆ.
ಹಾಗೆ ನೋಡಿದ್ರೆ ಮುಖ್ಯಮಂತ್ರಿ ಕೋರ್ಟ್ ಗೆ ಹೋಗಿ ಜಾಗ ವಾಪಾಸ್ ಕೇಳಬೇಕಿತ್ತು. ಆದರೂ ಅವರು ಬದಲಿ ಜಾಗ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ಎಲ್ಲಿ ಬರುತ್ತೆ? ಬಿಜೆಪಿಯವರ ಕಥೆಗಳನ್ನು ತೆಗೆದ್ರೆ ಗೊತ್ತಾಗುತ್ತೆ, ಎಲ್ಲಾ ಅವರ ಅವಧಿಯಲ್ಲೇ ಅಗಿರೋದು. ಅವರು ಮಾಡಿದ್ದ 50:50 ನಿವೇಶನ ಹಂಚಿಕೆಯನ್ನು ನಮ್ಮ ಸರ್ಕಾರವೇ ಕ್ಯಾನ್ಸಲ್ ಮಾಡಿದ್ದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯದಲ್ಲಿ ಡೆಂೆ ಪ್ರಕರಣ ಹೆಚ್ಚುತ್ತಿರುವುದನ್ನು ನಿಯಂತ್ರಿಸಬೇಕಾಗಿದೆ. ಸೊಳ್ಳೆಗಳನ್ನು ಲಾರ್ವಾ ಉತ್ಪತ್ತಿ ಸ್ಥಳಗಳಲ್ಲಿ ನಿಯಂತ್ರಣ ಮಾಡೋದು ಮೊದಲ ಕೆಲಸ. ಸಂಗ್ರಹವಾದ ನೀರಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತಿದೆ. ಅದನ್ನು ನಿಯಂತ್ರಿಸಬೇಕು. ಈ ವಿಚಾರವನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮನೆಗಳ ಮುಂದೆ ನೀರು ನಿಲ್ಲುತ್ತಿದೆ. ಸರ್ಕಾರದ ಕಡೆಯಿಂದ ಡೆಂೆ ಪ್ರಕರಣದಲ್ಲಿ ಸೂಕ್ತ ಚಿಕಿತ್ಸೆ ಕೊಡುವ ವ್ಯವಸ್ಥೆ ಆಗಿದೆ. ಡೆಂೆ ಒಂದು ವೈರಲ್ ಜ್ವರ, ಆದರೆ ಸಾವು ಸಂಭವಿಸದಂತೆ ತಡೆಯಬೇಕಾಗಿದೆ.
ಡೆಂೆ ಟೆಸ್ಟಿಂಗ್ ವಿಚಾರದಲ್ಲಿ ಆರೋಗ್ಯ ಇಲಾಖೆಯಿಂದ ಬೆಲೆ ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚಳ ಮಾಡುವುದು ಕಂಡುಬಂದರೆ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ದರ ಹೆಚ್ಚು ಪಡೆದರೆ ಅವರ ಲೈಸನ್ಸ್ ಕೂಡ ನಾವು ಕ್ಯಾನ್ಸಲ್ ಮಾಡಬಹುದು. ಎಪಿಡೆಮಿಕ್ ಮತ್ತು ಕೆಪಿಎಂಇ ಕಾನೂನಿನಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮಂಗಳೂರು ಸೇರಿದಂತೆ ದ.ಕ ಜಿಲ್ಲೆಯಲ್ಲಿ ಹಲವೆಡೆ ಗುಡ್ಡ ಕುಸಿತ ಆಗಿರುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮನೆ ಕಟ್ಟಲು ನಾವೇ ಗುಡ್ಡ ಅಗೀತಾ ಇದ್ದೇವೆ. ಅದು ವೈಜ್ಞಾನಿಕವಾಗಿ ಇರದೇ ಇದ್ದಾಗ ಮಳೆ ಬಂದಾಗ ಕುಸಿಯುತ್ತಿದೆ. ಇದು ನಾವೇ ಸೃಷ್ಟಿ ಮಾಡಿಕೊಂಡಿರುವ ಸಮಸ್ಯೆ. ತಡೆಗೋಡೆ ಕಟ್ಟಲು ದೊಡ್ಡ ಅನುದಾನ ಬೇಕು, ಅದರ ಬಗ್ಗೆ ಪರಿಶೀಲಿಸಲಾಗುವುದು ಎಂದರು.