ಬಾಲರಾಮನ ಪ್ರತಿಷ್ಠಾಪನೆಯ ವಷೋತ್ಸವ

hnl rama
Published on

ಹೊನ್ನಾಳಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದ ಕೋಟೆ ಶ್ರೀರಾಮಮಂದಿರದಲ್ಲಿ ಬುಧವಾರ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು.

ಪಟ್ಟಾಭಿರಾಮನ ವಿಶೇಷ: ಶ್ರೀರಾಮ, ಸೀತಾಮಾತೆ, ಲಕ್ಷ್ಮಣ, ಆಂಜನೇಯ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ನಂತರ ರಾಮನ ಪಟ್ಟಾಭಿಷೇಕ ನಡೆಯಿತು. ಈ ಜ್ಞಾಪಕಾರ್ಥವಾಗಿ ಹೊನ್ನಾಳಿಯ ಕೋಟೆಯಲ್ಲಿ ಶ್ರೀರಾಮ, ಸೀತಾಮಾತೆ, ಭರತ, ಶತೃಘ್ನ, ಲಕ್ಷ್ಮಣ ಹಾಗೂ ಆಂಜನೇಯ ಇರುವ ದಕ್ಷಿಣ ಭಾರತದ ಏಕೈಕ ಪಟ್ಟಾಭಿರಾಮನ ವಿಗ್ರಹ ಹೊನ್ನಾಳಿಯ ಕೋಟೆಯಲ್ಲಿ ಮಾತ್ರ ಇದೆ. ಇದನ್ನು ಹೊರತು ಪಡಿಸಿದರೆ ಉತ್ತರಪ್ರದೇಶದಲ್ಲಿ ಮಾತ್ರ ಪಟ್ಟಾಭಿರಾಮನ ಮೂರ್ತಿ ಕಾಣಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net