ಶಿರೂರು ಶ್ರೀ ಎರಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಕಾರ್ಯಕ್ರಮ

byn-1
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಶಿರೂರು ಮೇಲ್ಪಂಗ್ತಿಯ ಶ್ರೀ ಎರಗೇಶ್ವರ ದೇವಸ್ಥಾನದ ನೂತನ ಶ್ರೀ ಗಣಪತಿ ದೇವರು, ಶ್ರೀ ದುರ್ಗಾಪರಮೇಶ್ವರಿ ಹಾಗೂ ಭ್ರಜೇಶ್ವರನ ಪ್ರತಿಷ್ಠಾಪನೆ ಮತ್ತು ಶಿಲಾಮಯ ರಾಜಗೋಪುರ, ಹೆಬ್ಬಾಗಿಲು, ಉತ್ತರಪೌಳಿ ಲೋಕಾರ್ಪಾಣೆಯು ಏ.29ರಿಂದ ಮೇ 1ರ ತನಕ ಆಗಮಶೇಷ್ಠ ಕಟ್ಟೆ, ಶಂಕರ ಪರಮೇಶ್ವರ ಭಟ್ ನವಿಲಗೋಣ ಹಾಗೂ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಭಟ್ ಸಹಯೋಗದೊಂದಿಗೆ ಜರುಗಲಿದೆ ಎಂದು ದೇವಳದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ಚಂದ್ರಶೇಖರ ಶೆಟ್ಟಿ ರಜತಾದ್ರಿ ತಿಳಿಸಿದ್ದಾರೆ.

29ರಂದು ಬೆಳಗ್ಗೆ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ದೇವನಾಂದಿ, ಕಾತುಕ ಬಂಧನ, ಋತ್ವಿಕ ವರ್ಣನೆ, ಗಣೇಶ ಶಾಂತಿ, ಅಗ್ನಿಗ್ರಹಣ ಇತ್ಯಾದಿ, ಸಂಜೆ ಭೂತ ಶುದ್ಧಿ ಹವನ, ವಾಸ್ತು ರಾಕೋಘ್ನ ವಿಧಾನ, ಕಲಾ ಸಂಕೋಚ. ಅದಿವಾಸ ಪೂಜೆ, ಬಲಿ ಪ್ರಧಾನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. 30ರಂದು ಬೆಳಗ್ಗೆ 11.05ರ ಮಿಥುನ ಲಗ್ನದ ಮುಹೂರ್ತದಲ್ಲಿ ಶ್ರೀ ಧ್ವಜೇಶ್ವರ, ಶ್ರೀ ಮಹಾಗಣಪತಿ ಮತ್ತು ಶ್ರೀ ದುರ್ಗಾಪರಮೇಶ್ವರಿಯ ಪುನರ್ ಪ್ರತಿಷ್ಠಾಪನೆ ಹಾಗೂ ಶಿಲಾಮಯ ರಾಜಗೋಪುರ, ಹೆಬ್ಬಾಗಿಲು, ಉತ್ತರ ಪೌಳಿಯ ಲೋಕಾರ್ಪಣೆ, ಶತರುದ್ರಾಭಿಷೇಕ ಹಾಗೂ ಹವನ ನಡೆಯಲಿದ್ದು, ಸಂಜೆ ಮಂಡಲದರ್ಶನ, ಬ್ರಹ್ಮಕಲಶ ಸ್ಥಾಪನೆ, ರಂಗಪೂಜೆ, ದಂಡಬಲಿ, ಪ್ರಾಕಾರೋತ್ಸವ, ರಾಜೋಪಚಾರ ಸೇವೆ ಜರುಗಲಿದೆ.

ಮೇ 1ರಂದು ಅದಿವಾಸ ಹೋಮ, ಪೂರ್ಣ ಕಲಾವೃದ್ಧಿ, ಪ್ರಹ್ಮಕಲಶಾಭಿಷೇಕ, ಅವಕೃತ, ಧ್ವಜ ಅವರೋಹಣ, ಪೂರ್ಣಾಹುತಿ, ಮಹಾ ಮಂಗಳಾರತಿ, ಮಧ್ಯಾಹ್ನ ಪ್ರಸಾದ ವಿತರಣೆ, ಮಂಗಲ ಸಮಾರಂಭ, ಅನ್ನಸಂತರ್ಪಣೆ ನಡೆಯಲಿದೆ.

ಧಾರ್ಮಿಕ ಸಭೆ: ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ಸಂಜೆ ಧಾರ್ಮಿಕ ಸಭೆ ನಡೆಯಲಿದೆ. ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ದೆ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಶ್ರಿ ೀಕ್ಷೇತ್ರ ಮಾರಣಕಟ್ಟೆ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ, ಭಟ್ಕಳ ಶ್ರೀ ಕಾಳಿಕಾಂಬ ದೇವಸ್ಥಾನದ ಒಂದನೇ ಮೊಕ್ತೇಸರ ಗಜಾನನ ಆಚಾರ್ಯ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಡಾ.ಮಾಧವ ಶೆಟ್ಟಿ ಗಂಗಾವತಿ, ಗ್ರಾಪಂ ಅಧ್ಯಕ್ಷೆ ನಾಗರತ್ನಾ ವಿ.ಆಚಾರ್ಯ, ಸದಸ್ಯರಾದ ಉದಯ್ ಪೂಜಾರಿ, ಸುರೇಂದ್ರ ದೇವಾಡಿಗ, ಪ್ರಸನ್ನಕುಮಾರ್ ಶೆಟ್ಟಿ, ಮುಂಬೈ ಉದ್ಯಮಿ ಶ್ರೀಧರ ಪೂಜಾರಿ, ಬೆಂಗಳೂರು ಉದ್ಯಮಿ ಮಂಜುನಾಥ ಆಚಾರ್ಯ, ನರಸಿಂಹ ಆಚಾರ್ಯ, ನಿವೃತ್ತ ಮುಖ್ಯಶಿಕ್ಷಕ ರಾಮಕೃಷ್ಣ ಡಿ. ಉಪಸ್ಥಿತರಿರುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಚಂದ್ರಶೇಖರ ಶೆಟ್ಟಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net