ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಗ್ರಾ.ಪಂ ಚುನಾವಣೆಗೆ ನಿರ್ಗತಿಕ ವ್ಯಕ್ತಿಯನ್ನು ಅಖಾಡಕ್ಕಿಳಿಸಿದ ಯುವಕರು!

Simhadri Simha
Published on

ನಂಜನಗೂಡು: ವಿಷ್ಣುವರ್ಧನ್ ನಟನೆಯ ‘ಸಿಂಹಾದ್ರಿಯ ಸಿಂಹ’ ಸಿನಿಮಾದಿಂದ ಪ್ರೇರಣೆಗೊಂಡು ತಾಲೂಕಿನ ಬೊಕ್ಕಹಳ್ಳಿ ಗ್ರಾಮದ ಯುವಕರು, ನಿರ್ಗತಿಕ ವ್ಯಕ್ತಿಯನ್ನು ಗ್ರಾಪಂ ಚುನಾವಣೆಯ ಅಖಾಡಕ್ಕೆ ಇಳಿಸಿದ್ದಾರೆ.

ಅಂಕಪ್ಪನಾಯಕ ಇದೀಗ ಹುಳಿಮಾವು ಪಂಚಾಯಿತಿಯ ಅಭ್ಯರ್ಥಿಯಾಗಿದ್ದಾರೆ. ನಿತ್ಯ ನಂಜನಗೂಡಿಗೆ ಬಂದು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಹಾಗೂ ಅವರಿವರ ಬಳಿ ಕಾಸಿಗಾಗಿ ಕೈಚಾಚಿ ಅರೆಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅಂಕಪ್ಪನಾಯಕಗೆ ಯಾರ ಆಶ್ರಯವೂ ಇಲ್ಲ.

ಯುವಕರೇ ಈತನಿಗೆ ಹೊಸ ಬಟ್ಟೆ ಕೊಡಿಸಿ, ಕಾರಿನಲ್ಲಿ ಮೆರವಣಿಗೆ ಮಾಡಿಸಿಕೊಂಡು, ಹಾಕಿಸಿದ್ದಾರೆ. ಹಿಂದೆ ಗೆದ್ದವರೆಲ್ಲರೂ ಗ್ರಾಮಸ್ಥರ ದೂರು ದುಮ್ಮಾನಗಳಿಗೆ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಸಾಮಾನ್ಯ ವ್ಯಕ್ತಿಯಾದ ಅಂಕಪ್ಪನಾಯಕ ಅವರನ್ನು ಅಭ್ಯರ್ಥಿ ಮಾಡಿದ್ದೇವೆ ಎನ್ನುತ್ತಾರೆ ಯುವಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net