ಕೋಳಿಗಳಿಗೂ ಹುಟ್ಟುಹಬ್ಬದ ಸಂಭ್ರಮ!

Birthday Sheru veeru
Published on

ಬೆಳಗಾವಿ: ನಾಯಿ, ಬೆಕ್ಕು, ಮೇಕೆ, ಕುರಿ, ಗೋವುಗಳ ಹುಟ್ಟುಹಬ್ಬ ಆಚರಣೆಯ ಸುದ್ದಿಗಳೀಗ ಸಾಮಾನ್ಯವೆನಿಸತೊಡಗಿವೆ. ಈ ಪಟ್ಟಿಗೆ ಈಗ ಕೋಳಿಗಳ ಸೇರ್ಪಡೆ! ಬೆಳಗಾವಿಯ ಕುಟುಂಬ ಇಂಥದ್ದೊಂದು ವಿಲಕ್ಷಣ ಆಚರಣೆ ಮೂಲಕ ನಾಡಿನ ಗಮನಸೆಳೆದಿದೆ.

ಎಷ್ಟೋ ಜನ ತಮ್ಮ ಪ್ರೀತಿಯ ನಾಯಿ, ಬೆಕ್ಕು ಮತ್ತಿತರ ಪ್ರಾಣಿಗಳ ಹುಟ್ಟುಹಬ್ಬ ಆಚರಿಸ್ತಾರೆ. ನಾವ್ಯಾಕೆ ನಮ್ಮ ಪ್ರೀತಿಯ ಕೋಳಿಗಳ ಹುಟ್ಟುಹಬ್ಬ ಆಚರಿಸಬಾರದು ಎಂಬ ಆಲೋಚನೆ ಬಂದಿದ್ದೇ ತಡ ಬೆಳಗಾವಿ ನಗರದ ಮಾಳಿಗಲ್ಲಿಯ ಮೇಘಾನ್ ಲಂಗರಕಂಡೆ ಕೇಕ್​ ತರಿಸಿ ಕೋಳಿಗಳ ಹುಟ್ಟಹಬ್ಬ ಆಚರಿಸಿಯೇ ಬಿಟ್ಟರು.

ಶೇರು ಮತ್ತು ವೀರು ಎಂಬ ಹೆಸರಿನ ಕೋಳಿಗಳ ಹುಟ್ಟಿದ ದಿನವನ್ನು ನೆನಪಿನಲ್ಲಿಟ್ಟುಕೊಂಡಿದ್ದ ಮೇಘಾನ್​, ಕೇಕ್​ನ ಮೇಲೂ ಅವುಗಳ ಫೋಟೋವನ್ನು ಅಚ್ಚುಹಾಕಿಸಿದ್ದರು. ಈ ಕೋಳಿಗಳ ಎದುರು ಕೇಕ್​ ಇರಿಸಿ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಗಿದೆ. ಮಾಳಿ ಬಡಾವಣೆಯ ಮಕ್ಕಳಿಗೆ ಕೋಳಿಗಳ ಬರ್ತ್​ಡೇ ಆಚರಣೆ ಕುತೂಹಲ ಕೆರಳಿಸಿತ್ತು. ಈ ಬರ್ತ್​ಡೇ ಪಾರ್ಟಿಯಲ್ಲಿ ಬಡಾವಣೆಯ ಮಕ್ಕಳ ಸಂಭ್ರಮವೂ ಹೆಚ್ಚಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net