ವಿಜಯವಾಣಿ ಸುದ್ದಿಜಾಲ ಶಿಡ್ಲಟ್ಟ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ನರೇಗಾ ಮತ್ತು ವಿವಿಧ ಯೋಜನೆಗಳ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತೀಕ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಮಳಮಾಚನಹಳ್ಳಿ ಗ್ರಾಪಂ ವ್ಯಾಪ್ತಿಯ ಎನ್.ಆರ್.ಎಲ್.ಎಂ ಕಟ್ಟಡ, ಡಿಜಿಟಲ್ ಲೈಬ್ರರಿ ಕೇಂದ್ರ, ಸಭಾಂಗಣ, ತಾದೂರು ಗ್ರಾಮದ ಮಾದರಿ ಅಂಗನವಾಡಿ ಕೇಂದ್ರ, ಮಳೆ ನೀರು ಕೊಯ್ಲು ಕಾಮಗಾರಿ, ನಾಗಮಂಗಲ ಗ್ರಾಪಂ ವ್ಯಾಪ್ತಿಯ ನಡಿಪಿನಾಯಕನಹಳ್ಳಿಯ ಉದ್ಯಾನವನ, ಜಂಗಮಕೋಟೆ ಗ್ರಾಪಂ ವ್ಯಾಪ್ತಿಯ ಉದ್ಯಾನವನ, ಪ್ರಾಥಮಿಕ ಆರೋಗ್ಯ ಕೇಂದ್ರ, ಡಿಜಿಟಲ್ ಲೈಬ್ರರಿ, ಗ್ರಾಪಂ ಸಭಾಂಗಣ, ಕುಂಭಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕಾಳನಾಯಕನಹಳ್ಳಿಯ ಅಡುಗೆ ಕೋಣೆ, ಕೂಸಿನ ಮನೆ, ಲೈಬ್ರರಿ ಕೇಂದ್ರ, ಮಾದರಿ ಅಂಗನವಾಡಿ ಕೇಂದ್ರ ಪರಿಶೀಲಿಸಿದರು.
ಮಕ್ಕಳಿಗೆ ನೀಡುವ ಆಹಾರದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಅಂಗನವಾಡಿ ಕೇಂದ್ರದಲ್ಲಿ ಹೇಳಿದರು.
ತಾಪಂ ಇಒ ಹೇಮಾವತಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಮಳಮಾಚನಹಳ್ಳಿ, ನಾಗಮಂಗಲ, ಜಂಗಮಕೋಟೆ, ಕುಂಭಿಗಾನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಿಪಂ ವ್ಯವಸ್ಥಾಪಕ ಮದನ್, ಜಿಲ್ಲಾ ಯೋಜನಾಧಿಕಾರಿ ನಾರಾಯಣಸ್ವಾಮಿ, ಜಿಲ್ಲಾ ಸಮಾಲೋಚಕ ಎಸ್.ಬಿ.ಎಂ. ಜಿ.ಕೃಷ್ಣಪ್ಪ, ತಾಂತ್ರಿಕ ಸಂಯೋಜಕ ನಾಗೇಂದ್ರ, ನರೇಗಾ ಸಿಬ್ಬಂದಿ ಇದ್ದರು.