ಆಲೆಮನೆಗಳ ಪರಿಶೀಲನೆ

ಆಲೆಮನೆಗಳ ಪರಿಶೀಲನೆ
Published on

ಹಂಪಾಪುರ: ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಟಿ.ರವಿಕುಮಾರ್ ತಂಡ ಹಂಪಾಪುರ ಹೋಬಳಿಯ ಚಿಕ್ಕನಂದಿ, ಕಂಚಮಳ್ಳಿ, ಯರಹಳ್ಳಿ ಗ್ರಾಮಗಳಲ್ಲಿನ ಆಲೆಮನೆಗಳಿಗೆ ಶುಕ್ರವಾರ ಭೆಟಿ ನೀಡಿ ಪರಿಶೀಲಿಸಿತು.

ಗ್ರಾಹಕರಿಗೆ ಕಲಬೆರಕೆ ಇಲ್ಲದ ಶುದ್ಧ ಬೆಲ್ಲವನ್ನು ಪೂರೈಸಬೇಕು. ಬೆಲ್ಲ ತಯಾರಿಸಿದ ದಿನಾಂಕ, ಅವಧಿ ಮೀರುವ ದಿನಾಂಕ ಹಾಗೂ ಲೈಸೆನ್ಸ್ ನಂಬರ್, ಗುಣಮಟ್ಟದ ಚಿಹ್ನೆಯನ್ನು ನಮೂದಿಸಬೇಕು ಎಂದು ಸೂಚಿಸಿದರು.

ಬೆಲ್ಲ ತಯಾರಿಸುವವರು ಪರವಾನಗಿ ಹೊಂದಿರಬೇಕು. ತಪ್ಪಿದಲ್ಲಿ ಕ್ರಮ ಜರುಗಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net