ಬರ ಪರಿಹಾರ ರೈತರ ಖಾತೆಗೆ 74 ಕೋ.ರೂ.,

Bara_Parihara
Published on

ತುಮಕೂರು: ಕೊನೆಗೂ ಜಿಲ್ಲೆಯ ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಆಗಿದೆ. ಜಿಲ್ಲೆಯ 132332 ರೈತರಿಗೆ 74 ಕೋಟಿ ರೂ.,.ಗಳ ಬರ ಪರಿಹಾರ ಮಂಗಳವಾರ ತಲುಪಿದೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ 15975 ರೈತರಿಗೆ 92823283 ರೂ., ಗುಬ್ಬಿಯ 8234 ರೈತರಿಗೆ 41029295 ರೂ., ಕೊರಟಗೆರೆಯ 12144 ರೈತರಿಗೆ 72813925 ರೂ., ಕುಣಿಗಲ್-19022 ರೈತರಿಗೆ 96453201 ರೂ., ಮಧುಗಿರಿ-15548 ರೈತರಿಗೆ 89783195 ರೂ., ಪಾವಗಡ-5641 ರೈತರಿಗೆ 42583561 ರೂ., ಶಿರಾ-17013 ರೈತರಿಗೆ 111928237 ರೂ., ತಿಪಟೂರು-14955 ರೈತರಿಗೆ 77865493 ರೂ., ತುಮಕೂರು-11004 ರೈತರಿಗೆ 52055965 ರೂ. ಹಾಗೂ ತುರುವೇಕೆರೆ ತಾಲೂಕಿನ 12796 ರೈತರಿಗೆ 64809796 ರೂ., ಪರಿಹಾರ ನೀಡಲಾಗಿದೆ. ಒಟ್ಟಾರೆ 132332 ರೈತರಿಗೆ 742145951 ರೂ..ಗಳ ಬರ ಪರಿಹಾರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾಹಿತಿ ನೀಡಿದರು.

ಬರ ಪರಿಹಾರ ಹಣವನ್ನು ಖಾತೆಗೆ ಜಮೆ ಮಾಡಿದ ರೈತರ ಪಟ್ಟಿಯ ವಿವರವನ್ನು ಜಿಲ್ಲಾಧಿಕಾರಿಗಳ ಕಚೇರಿ ಜಾಲತಾಣ, ಎಲ್ಲ ತಾಲೂಕು ಕಚೇರಿ, ಗ್ರಾಪಂ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚುರಪಡಿಸಬೇಕು. ಖಾತೆಗೆ ಬರ ಪರಿಹಾರದ ಹಣ ಜಮೆಯಾಗದ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಫ್ರೂಟ್ ಐಡಿ ಹಾಗೂ ಆಧಾರ್ ಸಂಖ್ಯೆಯೊಂದಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಹಾಯವಾಣಿ ಕೇಂದ್ರ: ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಮಸ್ಯೆಯ ಅಹವಾಲು ಸಲ್ಲಿಸಲು ಜಿಲ್ಲೆಯಲ್ಲಿ ಸ್ಥಾಪಿಸಿರುವ 18 ಮೇವು ಬ್ಯಾಂಕುಗಳಲ್ಲಿಯೂ ಸಹಾಯವಾಣಿ ಕೇಂದ್ರವನ್ನು ತೆರೆಯಬೇಕು. ಸ್ವೀಕರಿಸಿದ ಅಹವಾಲುಗಳಿಗೆ ಅಧಿಕಾರಿಗಳು ಆದ್ಯತೆ ಮೇಲೆ ಸ್ಪಂದಿಸಿ ಪರಿಹರಿಸಲು ಕ್ರಮವಹಿಸಬೇಕು. ಮೇವು ಬ್ಯಾಂಕಿಗೆ ಖರೀದಿಸಿದ ಮೇವಿನ ಬಿಲ್ ಮೊತ್ತವನ್ನು ಸರಬರಾಜುದಾರರಿಗೆ ಆದಷ್ಟು ಬೇಗ ಪಾವತಿಸಲು ಶುಭಕಲ್ಯಾಣ್ ಸೂಚಿಸಿದರು.

ಸಭೆಯಲ್ಲಿ ಭೂದಾಖಲೆಗಳ ಉಪನಿರ್ದೇಶಕ ಎಂ.ಎನ್.ನಿರಂಜನ್, ಜಿಲ್ಲೆಯ ಉಪವಿಭಾಗಧಿಕಾರಿಗಳು, ತಹಸೀಲ್ದಾರರು, ತಾಪಂ ಇಒಗಳು ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರಕ್ಕೆ 148 ಕೋ.ರೂ., ಬೇಡಿಕೆ ಸಲ್ಲಿಕೆ !

ಕಳೆದ ಮುಂಗಾರು ಹಂಗಾಮಿನಲ್ಲಿ 3,14,630 ಹೆಕ್ಟೇರ್ ನಲ್ಲಿ 2,19,554 ಹೆಕ್ಟೇರ್ (ಶೇ.69.78) ಭತ್ತ, ಜೋಳ, ರಾಗಿ, ಮೆಕ್ಕೆಜೋಳ ಸೇರಿ ಏಕದಳ ಧಾನ್ಯ, ದ್ವಿದಳ ಧಾನ್ಯ, ಎಣ್ಣೆಕಾಳು ಹಾಗೂ ವಾಣಿಜ್ಯ ಬೆಳೆಯನ್ನು ಬಿತ್ತನೆ ಮಾಡಲಾಗಿತ್ತು. ಮಳೆ ಅಭಾವದಿಂದ ಶೇ.30ರಷ್ಟು ಬಿತ್ತನೆ ಕುಂಠಿತಗೊಂಡಿತ್ತು. ಹಾಗೂ ಚದುರಿದ ಮಳೆಯಿಂದ 1,80,422 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿ ಒಟ್ಟು 1086.22 ಕೋ.ರೂ., ನಷ್ಟವಾಗಿತ್ತು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 148.46 ಕೋ.ರೂ., ಪರಿಹಾರಕ್ಕೆ ಕೇಂದ್ರ ಅಧ್ಯಯನ ತಂಡದ ಮುಂದೆ ಜಿಲ್ಲಾಡಳಿತ ಬೇಡಿಕೆ ಇಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net