ಸತ್‌ಚಿಂತನೆಯಿಂದ ಉತ್ತಮ ಸೇವೆ :ಡಾ.ರೂಪಶ್ರೀ

innerwheel
ಇನ್ನರ್‌ವೀಲ್ ಕ್ಲಬ್ ಪದಗ್ರಹಣ ಸಮಾರಂಭವನ್ನು ಡಾ.ರೂಪಶ್ರೀ ಮರವಂತೆ ಉದ್ಘಾಟಿಸಿದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಸಮಾನ ಮನಸ್ಕ ಸದಸ್ಯರು ಮುಖ್ಯವಾಗಿರಬೇಕು. ಅವರೆಲ್ಲರ ಸತ್‌ಚಿಂತನೆಗಳ ಜತೆಗೆ ಆಸಕ್ತಿ ಹಾಗೂ ಛಲವಿದ್ದರೆ ಅಸಾಧ್ಯವೆಂಬುವುದು ಯಾವುದೂ ಇಲ್ಲ. ಮನಸ್ಸಿಗೆ ತೃಪ್ತಿ ನೀಡುವ ಉತ್ತಮ ಸೇವೆಗಳಿಂದ ಸಿಗುವ ಸಂತೋಷ ಶಾಶ್ವತವಾಗಿರುತ್ತದೆ ಎಂದು ಡಾ.ರೂಪಶ್ರೀ ಮರವಂತೆ ಹೇಳಿದರು.

ರೋಟರಿ ಸಮುದಾಯ ಭವನದಲ್ಲಿ ಬುಧವಾರ ಇನ್ನರ್‌ವೀಲ್ ಕ್ಲಬ್ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷೆ ಗುಲಾಬಿ ಮರವಂತೆ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಹೋಬಳಿದಾರ್ ಮತ್ತು ಆಯುಕ್ತಾ ಯಡ್ತರೆ ನೂತನ ಸದಸ್ಯರಾಗಿ ಕ್ಲಬ್‌ಗೆ ಸೇರ್ಪಡೆಗೊಂಡರು. ಅರ್ಹರಿಗೆ ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ಆರ್ಥಿಕ ಸಹಕಾರ ನೀಡಲಾಯಿತು. ರೋಟರಿ ಅಧ್ಯಕ್ಷ ಮೋಹನ ರೇವಣ್ಕರ್ ಸ್ಪಂದನಾ ಬುಲೆಟಿನ್ ಬಿಡುಗಡೆ ಮಾಡಿದರು.

ಕ್ಲಬ್ ಸದಸ್ಯೆ ಗೌರಿ ದೇವಾಡಿಗ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷೆ ಚಂದ್ರಿಕಾ ರಾಮು ಸ್ವಾಗತಿಸಿದರು. ಕಾರ್ಯದರ್ಶಿ ಮಾನಸ ರಾವ್ ವರದಿ ಮಂಡಿಸಿದರು. ಕಾರ್ಯದರ್ಶಿ ಚೈತ್ರಾ ಯಡ್ತರೆ ಸಂದೇಶ ವಾಚಿಸಿದರು. ಎಂ.ರಾಜೀವಿ ಗೋವಿಂದ್ ನಿರೂಪಿಸಿದರು. ಕೆ.ಶಾರದಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net