ನರೇಗಾ ಕೂಲಿ ಕಾರ್ಮಿಕರಿಗೆ ಅನ್ಯಾಯ

11 yelandur 03
Published on

ಯಳಂದೂರು: ಈ ಹಿಂದೆ ನರೇಗಾ ಕಾಮಗಾರಿ ನಡೆದ ಸ್ಥಳದಲ್ಲೇ ಅಂಬಳೆ ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ ಬೂದು ನೀರು ನಿರ್ವಹಣೆೆ ಕಾಲುವೆ ನಿರ್ಮಿಸಲಾಗಿದೆ. ಇದಕ್ಕೆ ಸಾಮಗ್ರಿ ಮೊತ್ತ ಇನ್ನೂ ಪಾವತಿಸಿಲ್ಲ. ಇದರಿಂದ ನರೇಗಾ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಅಂಬಳೆ ಗ್ರಾಮಸ್ಥರು ಆರೋಪಿಸಿದ್ದಾರೆ.

2020-21ನೇ ಸಾಲಿನಲ್ಲಿ ಅಂಬಳೆ ಗ್ರಾಮದ ಸ್ವಾಮಿ ಎಂಬುವರ ಜಮೀನಿನಿಂದ ನಾಗಮರದ ಜಮೀನಿನ ಸಮೀಪದ ನರೇಗಾ ಯೋಜನೆ ಅಡಿಯಲ್ಲಿ ಕಾಲುವೆ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಇದಕ್ಕೆ ಇನ್ನೂ ಸಾಮಗ್ರಿ ಮೊತ್ತದ ಹಣ ಪಾವತಿಯಾಗಿಲ್ಲ. ಈ ಕೆಲಸ ಬಾಕಿ ಇದ್ದು ಇದು ಪೂರ್ಣ ಮಾಡಿಕೊಡಿ ಎಂದು ನರೇಗಾ ಕೂಲಿ ಕಾರ್ಮಿಕರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಆದರೆ ಈಗ ಇದೆ ಕಾಲುವೆಯಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ಮಾಡಲಾಗಿದೆ. ಹಾಗಾಗಿ ಇದು ನರೇಗಾ ಯೋಜನೆಯ ಕಾಯ್ದೆಯ ಉಲ್ಲಂಘನೆಯಾಗಿದೆ. ಅಪೂರ್ಣ ಕಾಮಗಾರಿಯ ಮೇಲೆಯೇ ಮತ್ತೊಂದು ಕಾಮಗಾರಿ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರಾದ ಶ್ರೀನಿವಾಸ ನಾಯಕ, ಬಿಳಿಗಿರಿರಂಗ ನಾಯಕ, ಮಹದೇವನಾಯಕ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net