ಸರ್ಕಾರಿ ಶಾಲೆ ಮೂಲಸೌಲಭ್ಯಕ್ಕೆ ನೆರವು

neravu
Published on

ಬೆಳ್ತಂಗಡಿ: ಸರ್ಕಾರಿ ಪ್ರೌಢಶಾಲೆ ವೇಣೂರು ಇನ್ನು ಕೆಲವೇ ದಿನಗಳಲ್ಲಿ ಹಳೇ ಕಟ್ಟಡದಿಂದ ನೂತನ ಕಟ್ಟಡಕ್ಕೆ ಪೂರ್ಣವಾಗಿ ಸ್ಥಳಾಂತರಗೊಳ್ಳಲಿದ್ದು, ದಾನಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ಪಾಲಕರ ನೆರವಿನಿಂದ ಮೂಲಸೌಲಭ್ಯದ ಕಾರ್ಯ ಭರದಿಂದ ಸಾಗುತ್ತಿದೆ.

ಸರ್ಕಾರಿ ಅನುದಾನದಿಂದ 8 ತರಗತಿ ಕೋಣೆ ಬಿಟ್ಟರೆ ಮೂಲ ವ್ಯವಸ್ಥೆ ಮಾಡಲಾಗಿಲ್ಲ. ಶಿಕ್ಷಕರು ಹಾಗೂ ಅಭಿವೃದ್ಧಿ ಸಮಿತಿ ಕನಸಿನಂತೆ ಕುಡಿಯುವ ನೀರು, ಶೌಚಗೃಹ, ಅಡುಗೆ ಕೋಣೆ, ಹೆಚ್ಚುವರಿ ತರಗತಿ ಕೋಣೆಗಳು ಊರವರು, ದಾನಿಗಳು, ಹಳೇ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಶಾಲೆ ಶಿಕ್ಷಕ ವೃಂದ ಕೈಜೋಡಿಸಿ ನಿರ್ಮಿಸುತ್ತಿದೆ. ಇದೀಗ ವೇಣೂರು ಸಿಎ ಬ್ಯಾಂಕ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 1 ಲಕ್ಷ ಅನುದಾನ ಒದಗಿಸಿದ್ದು, ಸಂಘ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ ಹಾಗೂ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಜಯಂತ್ ಪೂಜಾರಿ ಶಾಲೆಗೆ ಚೆಕ್ ಹಸ್ತಾಂತರಿಸಿದ್ದಾರೆ. ಸಂಸ್ಥೆ ಉಪಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net