

ಅಳವಂಡಿ: ಶಿಕ್ಷಕರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಓದಿಗೆ ಪೂರಕ ವಾತಾವರಣ ನಿರ್ಮಿಸಲಿ ಎಂದು ಮಾಜಿ ಎಸ್ಡಿಎಂಸಿ ಅಧ್ಯಕ್ಷ ತೋಟಯ್ಯ ಅರಳೆಲೆಮಠ ಹೇಳಿದರು.
ಗ್ರಾಮದ ಕೇಂದ್ರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿ ಗುರುವಾರ ಮಾತನಾಡಿದರು.
ಜನಪ್ರತಿನಿಧಿಗಳು, ಜನರ ಸಹಕಾರ ಪಡೆದು ಮಕ್ಕಳಿಗೆ ಮೂಲ ಸೌಕರ್ಯ ಕಲ್ಪಿಸಿ, ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಬೇಕು. ಸರ್ಕಾರ ನೀಡುವ ಶೈಕ್ಷಣಿಕ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ತಳವಾರ, ಉಪಾಧ್ಯಕ್ಷೆ ಮಂಜುಳಾ ಗಡಾದ, ಸದಸ್ಯರಾದ ಜಯಶ್ರೀ ಜಂತ್ಲಿ, ಸಿದ್ದಪ್ಪ ಬಾರಕೇರ, ಇಂದಿರಾ ಗುನ್ನಳ್ಳಿ, ಮಲ್ಲಮ್ಮ ಹಳ್ಳಿಗುಡಿ, ಚನ್ನಮ್ಮ ಗಾಳಿ, ಗೌರಮ್ಮ ಹಡಪದ, ಕಾಶಮ್ಮ ಬಡಿಗೇರ, ಯರಿಸ್ವಾಮಿ ಇಳಿಗೇರ, ಕಾಶಪ್ಪ ಕುಂಬಾರ, ಮಲ್ಲಪ್ಪ ಆರೇರ, ನಾಗರಾಜ ಇಡಗಿ, ದೇವೆಂದ್ರರಡ್ಡಿ ಕಲ್ಗುಡಿ, ರೇಷ್ಮಾಬೇಗಂ, ರಾಜೇಸಾಬ, ಗಂಗಮ್ಮ ತಿಗರಿಮಠ, ಶ್ರೀಶೈಲ ಅಡವಳ್ಳಿ, ಪ್ರಮುಖರಾದ ಮಲ್ಲಪ್ಪ ಬೆಣಕಲ್, ವೀರೇಶ ತಿಗರಿಮಠ, ಮುಖ್ಯ ಶಿಕ್ಷಕ ಮಾರುತಿ ಕಾತರಕಿ ಇನ್ನಿತರರಿದ್ದರು.