

ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಬೊಳ್ಳಾಯಿ ಸಜಿಪಮೂಡ ಆಶ್ರಯದಲ್ಲಿ, ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲ ಬಿ.ಸಿ.ರೋಡ್, ಪಾಣೆಮಂಗಳೂರು ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ಶಿವಗಿರಿ ಮಹಿಳಾ ಸೊಸೈಟಿ ಮೆಲ್ಕಾರ್ ಸಹಯೋಗದೊಂದಿಗೆ ಶನಿವಾರ ಸುಭಾಷ್ ನಗರದಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಶ್ರೀಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಉದ್ಘಾಟಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಸಹಕಾರ ಸಂಘಗಳ ಆಡಳಿತ ಮತ್ತು ವ್ಯಾಜ್ಯಗಳ ಇತ್ಯರ್ಥದ ಬಗ್ಗೆ, ಉಪನ್ಯಾಸಕಿ ಬಿಂದು ಬಿ.ನಾಯರ್ ಸಹಕಾರ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆಯ ಕುರಿತು ಹಾಗೂ ಮೂಡುಬಿದಿರೆ ಧವಳ ಕಾಲೇಜಿನ ಪ್ರಾಧ್ಯಾಪಕ ಸಂತೋಷ್ ಶೆಟ್ಟಿ ಸಹಕಾರ ಸಂಘಗಳ ಮೌಲ್ಯಗಳ ಕುರಿತು ತರಬೇತಿ ನೀಡಿದರು.
ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಕುಮಾರ್ ಕೋಮಾಲಿ, ಜಯಶಂಕರ್ ಕಾನ್ಸಾಲೆ, ವಾಣಿ ವಸಂತ್, ಕೆ.ಸುಜಾತ ಎಂ, ಅರುಣ್ ಕುಮಾರ್ ಎಂ, ಆಶಿಶ್ ಪೂಜಾರಿ, ಸಿಇಒ ಮಮತಾ ಜಿ, ಶ್ರೀಗುರು ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಎನ್.ರತ್ನಾಕರ ಪೂಜಾರಿ ನಾಡಾರ್, ಶೈಲೇಶ್ ಕುಚ್ಚಿಗುಡ್ಡೆ, ಸಿಇಒ ಹೇಮಂತ್ ಕುಮಾರ್, ಮಹಾಮಂಡಲದ ಸಿಇಒ ಕಿಶೋರ್ ಕುಮಾರ್ ಶಿವಗಿರಿ, ಮಹಿಳಾ ಸೊಸೈಟಿ ಅಧ್ಯಕ್ಷೆ ಜಯಂತಿ ಹಾಗೂ ಸಿಇಒ ರೇಖಾ ಉಪಸ್ಥಿತರಿದ್ದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.