

ಕಡಬ: ಬೊಬ್ಬೆಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೇ ವಿದ್ಯಾರ್ಥಿ ಸಂಘ ಸಹಭಾಗಿತ್ವದಲ್ಲಿ, ನ್ಯೂ ವಿಷನ್ ಜನರೇಶನ್ ಪೋಗ್ರಾಮ್ ಕಾರ್ಯಕ್ರಮದಡಿಯಲ್ಲಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ಅಂಧತ್ವ ವಿಭಾಗ) ಆಶ್ರಯದಲ್ಲಿ ಕಣ್ಣಿನ ತಪಾಸಣಾ ಉಚಿತ ಶಿಬಿರ ಇತ್ತೀಚೆಗೆ ನಡೆಯಿತು.
ಎಸ್‌ಡಿಎಂಸಿ ಅಧ್ಯಕ್ಷ ಸದಾನಂದ ಕಡಿರ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಡಾ.ರಾಮಚಂದ್ರ ಮಾಹಿತಿ ನೀಡಿದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕೋಶಾಧಿಕಾರಿ ಸುಕುಮಾರ್ ಕಲ್ಪಡ, ಎಸ್‌ಡಿ ಎಂಸಿ ಮಾಜಿ ಅಧ್ಯಕ್ಷ ತೀರ್ಥಕುಮಾರ್ ಪೈಕ, ಹಳೇ ವಿದ್ಯಾರ್ಥಿ ಸಂಘದ ಜತೆಕಾರ್ಯದರ್ಶಿ ಅಶ್ವಿನ್ ಕರಿಮಜಲು, ನಿವೃತ್ತ ಸೈನಿಕ ಮಹೇಶ್ ಪೈಕ, ಶಿಕ್ಷಕರಾದ ಗೀತಾ ಕುಮಾರಿ, ಶೋಭಿತಾ, ಸುರೇಖಾ, ಶೃತಿ, ದಿವ್ಯಾ, ಜಯಲತಾ, ಸುಶ್ಮಿತಾ ಹಾಗೂ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಶಿಕ್ಷಕ ಜನಾರ್ದನ ಹೇಮಳ ಕಾರ್ಯಕ್ರಮ ನಿರೂಪಿಸಿದರು. 142 ಮಂದಿ ಕಣ್ಣಿನ ತಪಾಸಣೆ ಮಾಡಿಸಿದರು. 64 ಮಂದಿಗೆ ಕನ್ನಡಕ ಉಚಿತವಾಗಿ ನೀಡಲಾಯಿತು.