ಸ್ವಚ್ಛತಾ ಆಂದೋಲನ ಮಾಹಿತಿ ಕಾರ್ಯಾಗಾರ

New Project (30)
Published on

ಪುತ್ತೂರು ಗ್ರಾಮಾಂತರ: ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಜನ್ಮದಿನಾಚರಣೆ ಅಂಗವಾಗಿ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಬಡಗನ್ನೂರು ಘಟಕ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಡಗನ್ನೂರು ಹಾಗೂ ಬಡಗನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಆಂದೋಲನ, ಸ್ವಚ್ಛತೆ ಸಂಸ್ಕಾರ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಕಾರ್ಯಾಗಾರ ಬಡಗನ್ನೂರು ಶಾಲೆಯಲ್ಲಿ ಭಾನುವಾರ ನಡೆಯಿತು.

ಬಡಗನ್ನೂರು ಶಾಲೆ ಹಳೇ ವಿದ್ಯಾರ್ಥಿ ಸಂಘ ಗೌರವಾಧ್ಯಕ್ಷ ಪ್ರಗತಿಪರ ಕೃಷಿಕ ನಾರಾಯಣ ರೈ ಕುದ್ಕಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಟ್ಟೆ ಶ್ರೀಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಶಂಕರಿ ಪಟ್ಟೆ ಸ್ವಚ್ಛತೆ, ಸಂಸ್ಕಾರ ಹಾಗೂ ಪೌಷ್ಟಿಕ ಆಹಾರದ ಕುರಿತು ಮಾತನಾಡಿದರು.

ಬಡಗನ್ನೂರು ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ., ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್ ಗೌಡ ಕನ್ನಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಡಗನ್ನೂರು ಒಕ್ಕೂಟ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ, ಸೇವಾಪ್ರತಿನಿಧಿ ಸಾವಿತ್ರಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪಡುಮಲೆ ಘಟಕ ಸಮಿತಿ ಅಧ್ಯಕ್ಷೆ ಸೇಸಮ್ಮ ಪದಡ್ಕ, ಬಡಗನ್ನೂರು ಗ್ರಾಮದ ಸೇವಾದೀಕ್ಷಿತೆ ಮೋಹಿನಿ ರೈ ದೊಡ್ಡಡ್ಕ, ಪಡುಮಲೆ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ, ಒಡಿಯೂರು ಗ್ರಾಮವಿಕಾಸ ಯೋಜನೆ ಘಟಕ ಸಮಿತಿ ಪದಾಧಿಕಾರಿಗಳಾದ ಭಾರತಿ ರೈ, ಸುಲೋಚನಾ, ಪುಷ್ಪಲತಾ, ವಿಜಯಲಕ್ಷ್ಮೀ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net