ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ‘ಆಟಿ ವೈಶಿಷ್ಟ್ಯ’

New Project (23)
Published on

ಸುಳ್ಯ: ಸುಳ್ಯ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ‘ಆಟಿ ವೈಶಿಷ್ಟ್ಯ’ ಕಾರ್ಯಕ್ರಮ ನಡೆಯಿತು.

ಜಾನಪದ ಸಂಶೋಧಕ ಡಾ.ಸುಂದರ ಕೇನಾಜೆ ಕಾರ್ಯಕ್ರಮ ಉದ್ಘಾಟಿಸಿ, ಆಟಿ ತಿಂಗಳು ಅಂದರೆ ಹಿಂದಿನ ಕಾಲದಲ್ಲಿ ಕಷ್ಟದ ಕಾಲ. ಹಾಗಾಗಿ ಆಟಿಯ ತಿಂಗಳ ತಿನಿಸುಗಳನ್ನು ಉಪಯೋಗಿಸುವ ಹಿನ್ನೆಲೆಯನ್ನು ತಿಳಿಯುವುದು ಅವಶ್ಯಕ ಎಂದು ಹೇಳಿದರು.

ದಕ್ಷಿಣ ಕನ್ನಡ ಗೌಡ ವಿದ್ಯಾಸಂಘ ಅಧ್ಯಕ್ಷ ಧನಂಜಯ ಅಡ್ಪಾಂಗಾಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ದಯಾಮಣಿ ಕೆ., ಮುಖ್ಯಶಿಕ್ಷಕಿ ಭಾರತಿ ಪಿ. ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಸ್ವರ್ಣಕಲಾ ಎ.ಎಸ್. ಕಾರ್ಯಕ್ರಮ ಸಂಘಟಿಸಿದ್ದರು. ವಿದ್ಯಾರ್ಥಿನಿಯ ತನುಜ್ಞಾ ಅತಿಥಿಗಳನ್ನು ಪರಿಚಯಿಸಿದರು. ಶ್ರೇಯಾ ಆರ್. ಸ್ವಾಗತಿಸಿದರು. ದುರ್ಗಾಶ್ರೀ ವಂದಿಸಿದರು. ಶ್ರೀವಲ್ಲಿ ಕಾರ್ಯಕ್ರಮ ನಿರೂಪಿಸಿದರು.

ಆಟಿ ವೈಶಿಷ್ಟೃ ಕಾರ್ಯಕ್ರಮ ಪ್ರಯುಕ್ತ ವಿದ್ಯಾರ್ಥಿಗಳು ವಿವಿಧ ಆಟಿ ತಿಂಗಳ ಖಾದ್ಯಗಳನ್ನು ಪ್ರದರ್ಶಿಸಿದರು. ನಂತರ ವಿದ್ಯಾರ್ಥಿಗಳಿಗೆ ಆಂಟಿ ತಿಂಗಳ ಖಾದ್ಯಗಳ ಮತ್ತು ತುಳುನಾಡಿನ ವಿವಿಧ ಸಾಂಸ್ಕೃತಿಕ ಕಲೆಗಳ ಸ್ಪರ್ಧೆಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net