ಸವಣೂರಲ್ಲಿ ಮಾಹಿತಿ ಕಾರ್ಯಕ್ರಮ

New Project (31)
Published on

ಕಡಬ: ಬಿಜೆಪಿ ಸುಳ್ಯ ಮಂಡಲ, ಪಾಲ್ತಾಡಿ, ಪುಣ್ಚಪ್ಪಾಡಿ, ಸವಣೂರು ಶಕ್ತಿಕೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸವಣೂರು ಹಾಗೂ ಸವಣೂರು ಯುವಕ ಮಂಡಲ ವತಿಯಿಂದ ಯೋಗಾಭ್ಯಾಸ ಹಾಗೂ ಮಾಹಿತಿ ಕಾರ್ಯಕ್ರಮ ಸವಣೂರಲ್ಲಿ ನಡೆಯಿತು.

ಪುತ್ತೂರು ಕಲ್ಲಾರೆಯ ಓಂಕಾರ ಯೋಗ ಕೇಂದ್ರ ಮುಖ್ಯಸ್ಥ ಕರುಣಾಕರ ಉಪಾಧ್ಯಾಯ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ತಾರಾನಾಥ ಕಾಯರ್ಗ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಗ್ರಾಪಂ ಸದಸ್ಯರಾದ ಗಿರಿಶಂಕರ್ ಸುಲಾಯ, ಚಂದ್ರಾವತಿ ಸುಣ್ಣಾಜೆ, ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ., ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘ ಮಾಜಿ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ, ಸವಣೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸುಳ್ಯ ಮಂಡಲ ಎಸ್.ಟಿ. ಮೋರ್ಚಾ ಅಧ್ಯಕ್ಷ ಗಂಗಾಧರ್ ಪೆರಿಯಡ್ಕ, ಪುಷ್ಪಾವತಿ ಕೇಕುಡೆ, ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ.ಸವಣೂರು, ಪ್ರಮುಖರಾದ ದಯಾನಂದ ಮೆದು, ಪ್ರಕಾಶ್ ಮಾಲೆತ್ತಾರು, ಪ್ರಶಾಂತ್ ಬಂಬಿಲದೋಳ, ಶೇಷಪ್ಪ ನಾಯ್ಕ ಕನಡಕುಮೇರು ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net