ದೇಹದ ಸಮತೋಲನಕ್ಕೆ ಪೂರಕ : ಉಡುಪಿ ಎಸ್ಪಿ ಅಧೀಕ್ಷಕ ಹರಿರಾಂ ಶಂಕರ್ ಅಭಿಮತ

New Project (28)
Published on

ಬೆಳ್ತಂಗಡಿ: ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಿ ದೇಹದ ಸಮತೋಲನ ಕಾಪಾಡಿಕೊಳ್ಳುವುದು ಅನಿವಾರ್ಯ. ಎಲ್ಲರೂ ಸ್ವಸ್ಥ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಸಹಭಾಗಿಗಳಾಗಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹೇಳಿದರು.

ಪರೀಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ದಲ್ಲಿ ಯೋಗ ದಿನಾಚರಣೆ ಅಂಗವಾಗಿ ಬೆಳಗ್ಗೆ 6 ಗಂಟೆಗೆ ವ್ಯಾರಥಾನ್‌ಗೆ ಹಸಿರು ನಿಶಾನೆ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸುಮಾರು 300 ಓಟಗಾರರು ಭಾಗವಹಿಸಿದ ಮ್ಯಾರಥಾನ್‌ನಲ್ಲಿ ವಿವಿಧ ವಯೋಮಿತಿ ವಿಭಾಗಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ೋಷಿಸಲಾಯಿತು. ಮ್ಯಾರಥಾನ್‌ನಲ್ಲಿ ಬಹುಮಾನ ಗಳಿಸಿದವರಿಗೆ ಮೆಡಲ್ ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು.

ಸೌಖ್ಯವನ ಕ್ಷೇಮ ಹಾಲ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಯೋಗದಲ್ಲಿ ಸಾಧನೆ ಮಾಡಿ 73ರ ಇಳಿ ವಯಸ್ಸಿನಲ್ಲೂ ಸದೃಢವಾಗಿರುವ ನೀಲಾವರ ದಮಯಂತಿ ಅವರನ್ನು ‘ಸೌಖ್ಯ ಯೋಗ ಭಾಗ್ಯ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೆಎಂಸಿ ಮಣಿಪಾಲದ ನರರೋಗ ಶಸ್ತ್ರಚಿಕಿತ್ಸಾ ತಜ್ಞ ವೈದ್ಯ ಡಾ.ಗಿರೀಶ್ ಮೆನನ್, ಮಣಿಪಾಲ ಪೊಲೀಸ್ ಠಾಣಾ ವೃತ್ತನಿರೀಕ್ಷಕ ಮಹೇಶ್ ಪ್ರಸಾದ್, ಕೆನರಾ ಬ್ಯಾಂಕ್ ಪರ್ಕಳ ಶಾಖೆಯ ಪ್ರಬಂಧಕರಾದ ಹರ್ಷ, ಮುಖ್ಯವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ ಉಪಸ್ಥಿತರಿದ್ದರು. ಡಾ.ಶೋಭಿತ್ ಶೆಟ್ಟಿ ಸ್ವಾಗತಿಸಿದರು. ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ನಿರೂಪಿಸಿದರು. ಡಾ.ಪೂಜಾ ಜಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net