ಶುಚಿತ್ವ ಇದ್ದಲ್ಲಿ ಆರೋಗ್ಯ

mahiti
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಕಲ್ಯಾಣ ಸಂಘದ ವತಿಯಿಂದ ವಿದ್ಯಾರ್ಥಿನಿಯರಿಗೆ ಮಹಿಳಾ ಆರೋಗ್ಯ ಮತ್ತು ಶುಚಿತ್ವ ಎಂಬ ಮಾಹಿತಿ ಕಾರ್ಯಕ್ರಮದಲ್ಲಿ ಡಾ.ಅಕ್ಷತಾ ನಾಯಕ್ ಮಾಹಿತಿ ನೀಡಿದರು
Published on

ಕಾರ್ಕಳ: ಆರೋಗ್ಯ ಮತ್ತು ಶುಚಿತ್ವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಶುಚಿತ್ವ ಇರುವಲ್ಲಿ ಆರೋಗ್ಯ ಇರುತ್ತದೆ. ಮೂಢನಂಬಿಕೆಯಿಂದ ವಿದ್ಯಾರ್ಥಿನಿಯರು ದೂರವಿದ್ದು, ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಡಾ.ಅಕ್ಷತಾ ನಾಯಕ್ ಹೇಳಿದರು.

ಕ್ರಿಯೆಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಕಲ್ಯಾಣ ಸಂಘದ ವತಿಯಿಂದ ವಿದ್ಯಾರ್ಥಿನಿಯರಿಗೆ ಮಹಿಳಾ ಆರೋಗ್ಯ ಮತ್ತು ಶುಚಿತ್ವ ಎಂಬ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಪನ್ಯಾಸಕಿ ರಶ್ಮಿ ರಾವ್, ಮನಿಷಾ, ಜ್ಯೋತಿ, ಸ್ಮಿತಾ, ಸುದೀಕ್ಷಾ ಶೆಣೈ, ವಸತಿ ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು ಪಾಲ್ಗೊಂಡಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ರಶ್ಮಿ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net