

ಕೋಟ: ಇಲ್ಲಿನ ಗಿಳಿಯಾರು ಯುವಕ ಮಂಡಲದ ಆಶ್ರಯದಲ್ಲಿ ಹಳ್ಳಿಗಾಡಿನ ಕ್ರೀಡಾ ಸೊಗಡು ಹಳೆ ಆಟ ಹೊಸ ಚಿಗುರು ಎಂಬ ವಿನೂತನ ಶೀರ್ಷಿಕೆಯಡಿ ಕಾರ್ಯಕ್ರಮ ಭಾನುವಾರ ಮೂಡುಗಿಳಿಯಾರು ಶಾಲಾ ವಠಾರದಲ್ಲಿ ನಡೆಯಿತು.
ಮೂಡುಗಿಳಿಯಾರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಶೇಖರ ಗರಡಿಮಕ್ಕಿ, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭರತ್‌ಕುಮಾರ್ ಶೆಟ್ಟಿ, ಸದಸ್ಯ ಯೋಗೇಂದ್ರ ಪೂಜಾರಿ, ಉದ್ಯಮಿ ಅಶೋಕ ಬನ್ನಾಡಿ, ಗಿಳಿಯಾರು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ ಗಿಳಿಯಾರು, ಉಪಾಧ್ಯಕ್ಷ ಸುಭಾಶ್ ಪೂಜಾರಿ, ಕಾರ್ಯದರ್ಶಿ ಅಕ್ಷಯ ಸೋಮಯಾಜಿ, ಖಜಾಂಚಿ ರಾಘವೇಂದ್ರ ಆಚಾರ್, ರವೀಂದ್ರ ಬನ್ನಾಡಿ, ಪ್ರದೀಪ್ ಪುತ್ರನ್, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.