ನಂಬಿಕೆಗಳ ಕ್ರಿಯಾರೂಪ ಆಚರಣೆ

sahithya
ಸಾಹಿತ್ಯ ಸಂಘ ಕಾರ್ಕಳದ ಮಾಸಿಕ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಚಾರ್ಯ ಡಾ.ಪೂವಪ್ಪ ಕಣಿಯೂರು ಮಾತನಾಡಿದರು.
Published on

ಕಾರ್ಕಳ: ನಂಬಿಕೆಗಳ ಕ್ರಿಯಾ ರೂಪವೇ ಆಚರಣೆ ಎಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಪೂವಪ್ಪ ಕಣಿಯೂರು ಅಭಿಪ್ರಾಯಪಟ್ಟರು.ಕಾರ್ಕಳ ಸಾಹಿತ್ಯ ಸಂಘ ಮಾಸಿಕ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಣ್ಣಿಗೆ ಕಾಣದ ಸತ್ಯ ಸಂಗತಿ ಹಾಗೂ ನಾಗರಾಧನೆಯ ಬಗ್ಗೆ ಜನರಲ್ಲಿರುವ ನಂಬಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಕೋಶಾಧಿಕಾರಿ ಎಸ್.ನಿತ್ಯಾನಂದ ಪೈ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ನಿರಂಜನ್ ಚಿಪ್ಲೂಂಕರ್, ವೈ ಅನಂತಪದ್ಮನಾಭ ಭಟ್ ಉಪಸ್ಥಿತರಿದ್ದರು. ಕಾರ್ಯಧ್ಯಕ್ಷ ಕೆ.ಪಿ ಶೆಣೈ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಕೆ.ಈಶ್ವರ ಮಂಗಲ ವಂದಿಸಿದರು. ಕೆ.ಕೆ ನಂಬಿಯಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net