ಕಾಡಾನೆ ಹಾವಳಿ ಹಿನ್ನಲೆ ಮಾಹಿತಿ ಸಭೆ

New Project (7)
Published on

ಪುತ್ತೂರು ಗ್ರಾಮಾಂತರ: ಮಾಡ್ನೂರು ಗ್ರಾಮ, ಸುತ್ತಮುತ್ತಲಿನ ಪರಿಸರಕ್ಕೆ ಕಾಡಾನೆ ಲಗ್ಗೆಯಿಟ್ಟು ಅಪಾರ ಪ್ರಮಾಣದ ಕೃಷಿಗೆ ಹಾನಿಯುಂಟು ಮಾಡಿದೆ. ಕಾಡಾನೆ ಹಾವಳಿಯಿಂದಾಗಿ ನಷ್ಟಕ್ಕೊಳಗಾದ ಕೃಷಿಕರಿಗೆ ಕಾನೂನು ಪ್ರಕಾರ ಸರ್ಕಾರದಿಂದ ಸಿಗಬೇಕಾದ ಪರಿಹಾರ, ಮುಂದೆ ಕಾಡಾನೆ ಹಾವಳಿ ತಡೆಯುವ ಕುರಿತು ಮಾಹಿತಿ, ಮಾರ್ಗದರ್ಶನ ಸಭೆ ಶುಕ್ರವಾರ ಮಾಡ್ನೂರು ಗ್ರಾಮದ ಕಾವಿನ ಸಮುದಾಯ ಭವನದಲ್ಲಿ ನಡೆಯಿತು.

ಭಾರತೀಯ ಕಿಸಾನ್ ಸಂಘದ ದ.ಕ. ಜಿಲ್ಲಾಧ್ಯಕ್ಷ ಸತ್ಯನಾರಾಯಣ ಅವರು ಕಾಡಾನೆ ಹಾವಳಿಯಿಂದ ಕೃಷಿ ನಾಶಗೊಂಡು ನಷ್ಟಕ್ಕೊಳಗಾಗಿರುವ ಕೃಷಿಕರಿಗೆ ಸಲಹೆ ನೀಡಿದರು. ಮುಂದೆ ಕೃಷಿಕರಿಗೆ ಯಾವುದೇ ಸಂದರ್ಭದಲ್ಲೂ ಭಾರತೀಯ ಕಿಸಾನ್ ಸಂಘ ಸಹಕಾರ ನೀಡಲಿದೆ ಎಂದರು.

ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರಾಂತ ಪ್ರಮುಖರಾದ ಸುಬ್ರಾಯ, ದ.ಕ. ಜಿಲ್ಲಾ ಕಾರ್ಯದರ್ಶಿ ರಾಮಪ್ರಸಾದ್,ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಜನಾರ್ದನ ರೈ ಪಡ್ಡಂಬೈಲು, ತಾಲೂಕು ಪ್ರಧಾನ ಕಾರ್ಯದರ್ಶಿ ಮಹಾಬಲ ರೈ ಕಕ್ಕುಂಜೋಡು, ತಾಲೂಕು ಸಮಿತಿಯ ಹಿರಿಯ ಸಲಹೆಗಾರ ಮೋಹನ್ ರೈ ನರಿಮೊಗರು, ಮಹಿಳಾ ವಿಭಾಗದ ಪ್ರಮುಖ್ ನಯನಾ ರೈ ಅರಿಯಡ್ಕ, ಕೃಷಿಕ ಪರಿವಾರದ ಮುಖಂಡರಾದ ದಿವ್ಯಪ್ರಸಾದ್ ಕಾವು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net