

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘದ ಆಶ್ರಯದಲ್ಲಿ ಪ್ರಧಾನ ಕಚೇರಿ, ಎಲ್ಲಾ ಶಾಖೆಗಳ ಸಲಹಾ ಸಮಿತಿ ಸದಸ್ಯರೊಂದಿಗೆ ಸಂಘದ ಅಭಿವೃದ್ಧಿ ಬಗ್ಗೆ ಇತ್ತೀಚೆಗೆ ವಿಚಾರ ವಿನಿಮಯ, ಮಾಹಿತಿ ಕಾರ್ಯಾಗಾರ ಪ್ರಧಾನ ಕಚೇರಿಯ ಬಿ.ಸಿ.ಹೊಳ್ಳ ಸಹಕಾರ ಸಭಾಭವನದಲ್ಲಿ ಜರುಗಿತು.
ರಾಷ್ಟ್ರಪತಿ ಪದಕ ಪುರಸ್ಕೃತ, ರಾಜ್ಯ ಗುಪ್ತ ವಾರ್ತೆಯ ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ಬಿ.ಆನಂದ ಶೆಟ್ಟಿ ಉದ್ಘಾಟಿಸಿದರು. ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ಬಿ.ಆನಂದ ಶೆಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕ ಜಿ.ತಿಮ್ಮ ಪೂಜಾರಿ ಸಲಹಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿ ಸಲಹಾ ಸಮಿತಿ ಸದಸ್ಯರೊಂದಿಗೆ ಸಂಘದ ಅಭಿವೃದ್ಧಿ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.
ಸಂಘದ ನಿರ್ದೇಶಕರಾದ ಮಹೇಶ ಶೆಟ್ಟಿ, ರಂಜಿತ್ ಕುಮಾರ್, ಜಿ.ಅಜಿತ್ ದೇವಾಡಿಗ, ವಸಂತಿ ಪೂಜಾರಿ, ಸಂಘದ ಪ್ರಧಾನ ಕಚೇರಿ, ಎಲ್ಲಾ ಶಾಖೆಗಳ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.