ತಲೆಮರೆಸಿಕೊಂಡಿದ್ದಾತ ಅಂದರ್ : ಆತ್ಮಹತ್ಯೆಗೈದಿದ್ದ ಪತ್ನಿ, ಮಗುವಿನ ಅಂತ್ಯಸಂಸ್ಕಾರಕ್ಕೆ ಆಗಮಿಸಿದಾಗ ಸೆರೆ

finally justice
Published on

ಬ್ರಹ್ಮಾವರ: ಒಂದೂವರೆ ವರ್ಷದ ಮಗುವಿನೊಂದಿಗೆ ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಅವರ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಹೆರಂಜೆ ನಿವಾಸಿ, ಕೊಲೆಯತ್ನ ಪ್ರಕರಣದಲ್ಲಿ ಶಿಕ್ಷೆಯಾಗಿ ತಲೆಮರೆಸಿಕೊಂಡಿದ್ದ ಹೆರಂಜೆಯ ಸುಭಾಷ್ ನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. 15 ವರ್ಷದ ಹಿಂದೆ ನಡೆದಿದ್ದ ಕೊಲೆಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಸುಭಾಷ್ ನಾಯ್ಕನನ್ನು ಅಪರಾಧಿಯೆಂದು ಘೋಷಿಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ಬಂಧನ ಭೀತಿಯಿಂದ ಸುಭಾಷ್ ನಾಯ್ಕ ನಾಪತ್ತೆಯಾಗಿದ್ದನು. ಮನೆಯಲ್ಲಿ ಮಗು ಮತ್ತು ಪತ್ನಿ ಸುಶ್ಮಿತಾ ಇಬ್ಬರೇ ಇದ್ದು, ಸುಭಾಷ್ ನಾಯ್ಕಗೆ ವಾರೆಂಟ್ ನೋಟಿಸ್ ಬರುತ್ತಿತ್ತು. ಇದರಿಂದ ಮನನೊಂದ ಸುಶ್ಮಿತಾ ತನ್ನ ಒಂದೂವರೆ ವರ್ಷದ ಮಗುವಿನೊಂದಿಗೆ ಸೋಮವಾರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಂಗಳವಾರ ಉಡುಪಿ ತಾಲೂಕು ತಹಸೀಲ್ದಾರ್ ಪಿ.ಆರ್.ಗುರುರಾಜ ಸಮ್ಮುಖದಲ್ಲಿ ಮಣಿಪಾಲದಲ್ಲಿ ಮರಣೋತ್ತರ ಪ್ರಕ್ರಿಯೆ ನಡೆಸಿ ಬಳಿಕ ಆರೂರು ಗ್ರಾಮ ಪಂಚಾಯಿತಿ ರುದ್ರಭೂಮಿಯಲ್ಲಿ ತಾಯಿ-ಮಗುವಿನ ಅಂತ್ಯಸಂಸ್ಕಾರ ನಡೆಸಲಾಯಿತು. ಅಲ್ಲಿಗೆ ಆಗಮಿಸಿದ್ದ ಸುಭಾಷ್ ನಾಯ್ಕನನ್ನು ಪೊಲೀಸರು ಬಂಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net