ಶ್ರಮಜೀವಿಯಾದರೆ ಗುರಿ ಸಾಧಿಸಲು ಸಾಧ್ಯ

14 KMP 01
ಕಂಪ್ಲಿಯ ತಹಸಿಲ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಭಗೀರಥ ಮಹರ್ಷಿ ಜಯಂತ್ಯುತ್ಸವದಲ್ಲಿ ತಹಸೀಲ್ದಾರ್ ಶಿವರಾಜ ಮಾತನಾಡಿದರು. ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ, ಪ್ರಮುಖರಾದ ಯು.ದೊಡ್ಡ ಬಸಪ್ಪ, ಯು.ಬಸವರಾಜ, ಯು.ರುದ್ರಪ್ಪ, ಕೆ.ನಾಗರಾಜ, ಯು.ರಮೇಶ ಇತರರಿದ್ದರು.
Published on

ಕಂಪ್ಲಿ: ಅವಿರತ ಪರಿಶ್ರಮದ ಪ್ರತೀಕವೇ ಭಗೀರಥ ಮಹರ್ಷಿ ಎಂದು ತಹಸೀಲ್ದಾರ್ ಶಿವರಾಜ ಹೇಳಿದರು.

ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಸಾಧ್ಯವಾದದ್ದನ್ನು ಸಾಧಿಸಬಹುದು ಎಂಬುದು ಭಗೀರಥ ಮಹರ್ಷಿ ಜೀವನದ ಸಂದೇಶವಾಗಿದೆ.

ಪ್ರತಿಯೊಬ್ಬರೂ ಶ್ರಮಜೀವಿಯಾದಲ್ಲಿ ಮಾತ್ರ ಗುರಿ ಸಾಧಿಸಲು ಸಾಧ್ಯ. ನಿತ್ಯ ಜೀವನದಲ್ಲಿ ಭಗೀರಥ ಮಹರ್ಷಿಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಉಪ್ಪಾರ ದೊಡ್ಡ ಬಸಪ್ಪ ಮಾತನಾಡಿ, ಉಪ್ಪಾರ ಸಮುದಾಯದ ಚಟುವಟಿಕೆಗಳಿಗೆ ಸಮುದಾಯ ಭವನ ನಿರ್ಮಿಸುವ ಅಗತ್ಯವಿದ್ದು, ತಾಲೂಕು ಆಡಳಿತ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಕೆ.ಗೋವಿಂದಪ್ಪ, ಉಪ್ಪಾರಲಕ್ಷ್ಮೀ, ಪಂಪಾಪತಿ, ಯು.ಸ್ವಾಮಿ, ವೆಂಕಟಪತಿ, ವೆಂಕಟೇಶ, ನಾಗರಾಜ, ಗೋಪಾಲ್, ಆನಂದಪ್ಪ, ಮುನಿಯಪ್ಪ, ನಾರಾಯಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net