ಇಂದ್ರಪ್ರಸ್ಥ ವಿದ್ಯಾರ್ಥಿಗಳು ತಾಲೂಕುಮಟ್ಟಕ್ಕೆ ಆಯ್ಕೆ

New Project (34)
Published on

ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆ.11ರಂದು ಉದನೆ ಸಂತ ಅಂತೋನಿ ಪ್ರೌಢಶಾಲೆಯಲ್ಲಿ ವಲಯಮಟ್ಟದ ವಾಲಿಬಾಲ್ ಟೂರ್ನಿಯ 17ರ ವಯೋಮಾನದ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಚಿಂತನ್ ಕೆ.ಸಿ., ಆಯುಶ್, ಕವೀಶ್ ಬಿ.ಕೆ., ಅನ್ಮಯ್ ಶೆಟ್ಟಿ, ಅಕ್ಷಯ್ ಕೆ.ಎಸ್., ಸಾಯಿದೇವ ಹರ್ಷ, ಆಯತುಲ್ಲ ಸಲೀಂ, ಇರಾಝ್, ಪ್ರೀತಂ, ಮಹಮ್ಮದ್ ಇಮಾಮ್, ಸಕೇತ್, ಯಶ್ವಿತ್ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸವ್ಯ, ಅನ್ವಿ ಆಚಾರ್ಯ, ಅನುಶ್ರೀ, ಸೃಷ್ಟಿ, ತನ್ವಿ, ಸ್ತುತಿ, ಶ್ರೇಯಾ ಆರ್., ಧನ್ವಿ ಶೆಟ್ಟಿ ಹಾಗೂ ಲಕ್ಷೃ ತಂಡವನ್ನು ಪ್ರತಿನಿಧಿಸಿದ್ದರು.

ಮುಖ್ಯಗುರು ವೀಣಾ ಆರ್.ಪ್ರಸಾದ್ ಅಭಿನಂದಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಿನಾಥ್, ವಿದ್ಯಾ, ಶ್ರೀರಂಜಿನಿ ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net