ಬ್ರಹ್ಮಶ್ರೀ ನಾರಾಯಣಗುರು ಜಯಂತಿ

New Project (24)
Published on

ಕಾಸರಗೋಡು: ಬಿಲ್ಲವ ಸೇವಾ ಸಂಘ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಅವರ 171ನೇ ಜನ್ಮಜಯಂತಿಯನ್ನು ಕಾಸರಗೋಡಿನ ಕರಂದಕ್ಕಾಡುವಿನಲ್ಲಿ ಆಚರಿಸಲಾಯಿತು.

ಕಾರ್ಯಕ್ರಮ ಅಂಗವಾಗಿ ಗಣಪತಿ ಹೋಮ, ಭಜನೆ ಹಾಗೂ ಶ್ರೀ ನಾರಾಯಣಗುರು ಪೂಜೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಘು ಮೀಪುಗುರಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ರಾಮಕೃಷ್ಣ ಕಾಲೇಜು ಪ್ರಾಧ್ಯಾಪಕ ಧನರಾಜ್ ಹಾಗೂ ಮಂಜೇಶ್ವರ ಬ್ಲಾಕ್ ಸಹ ಅಭಿವೃದ್ಧಿ ಅಧಿಕಾರಿಯಾಗಿದ್ದ ಸುಲೋಚನಾ ಕುಂಜತ್ತೂರ್ ಮುಖ್ಯ ಅತಿಥಿಗಳಾಗಿದ್ದರು.

ಎಸ್ಸೆಸ್ಸೆಲ್ಸಿ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಎ ಪ್ಲಸ್ ಅಂಕ ಗಳಿಸಿ ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳಾದ ಅಶ್ವಿನಿ, ವಿದ್ಯಾರ್ಜಿತ್ ಕೆ., ಶ್ರೀಯಾ ಧನರಾಜ್, ಜಿತೇಶ್, ಸಮೀಕ್ಷಾ, ಸಾಯಿಕೃಷ್ಣ ಅವರನ್ನು ಅಭಿನಂದಿಸಲಾಯಿತು. ಯುವ ಕೃಷಿಕ ಪ್ರಶಸ್ತಿ ಪಡೆದ ರಂಜಿತ್ ಬೀರಂತಬೈಲು, ಅಕ್ಯುಪಂಕ್ಚರ್‌ನಲ್ಲಿ ಪ್ರಾವೀಣ್ಯ ಪಡೆದ ನಾಗೇಶ್ ಪೂಜಾರಿ ಅವರನ್ನು ಗೌರವಿಸಲಾಯಿತು.

ಗೌರವಾಧ್ಯಕ್ಷ ಕೇಶವ ಕೊಲ್ಕೆಬೈಲ್, ಕೋಶಾಧಿಕಾರಿ ಶಮ್ಮಿ ಕುಮಾರ್, ಸುಕೀರ್ತಿ, ಸತೀಶ್ ಗುಡ್ಡೆಮನೆ, ಸಂತೋಷ್, ಕಮಲಾಕ್ಷ ಸೂರ್ಲು, ಅಶೋಕ್ ಬೀರಂತಬೈಲ್, ಚಂದ್ರಕಲಾ, ರೋಹಿಣಿ, ರವಿ ಪೂಜಾರಿ, ಮಹೇಶ್ ಮೊದಲಾದವರು ಉಪಸ್ಥಿತರಿದ್ದರು. ಹರಿಕಾಂತ್ ಸಾಲ್ಯಾನ್ ಕಾಸರಗೋಡು ಸ್ವಾಗತಿಸಿದರು. ಪ್ರೆಮಜಿತ್ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕೆ.ಆರ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net