

ಕೂಡ್ಲಿಗಿ: ಒಂದು ಹನಿಯ ಲಸಿಕೆ ಮಗುವಿನ ಭವಿಷ್ಯ ರೂಪಿಸಲಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದ್ರಧನುಷ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಐದು ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕಲು ಉದ್ದೇಶಿಸಿರುವ ಇಂದ್ರಧನುಷ್ 5.0 ಲಸಿಕೆ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನವಾಗಲಿ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಬಿ. ಷಣ್ಮುಖನಾಯ್ಕ, ಟಿಎಚ್‌ಒ ಡಾ.ಪ್ರದೀಪ್ ಕುಮಾರ್, ಆಡಳಿತ ವೈದ್ಯಾಧಿಕಾರಿ ವಿನಯ್ ಮುದೇಗೌಡ್ರು, ಪಪಂ ಸದಸ್ಯೆ ಲಕ್ಷ್ಮೀ ದೇವಿ, ಹೊನ್ನುರಪ್ಪ, ದೇವರಮನಿ ಮಹೇಶ, ಆಪ್ತ ಸಮಾಲೋಚಕರಾದ ಕೆ.ಪ್ರಶಾಂತ ಕುಮಾರ್, ಓಬಣ್ಣ ಹಿರಿಯ ಆರೋಗ್ಯ ಸಹಾಯಕ ಜಗದೀಶ್ ನಾಯ್ಕ, ಮಹಿಳಾ ಆರೋಗ್ಯ ಸಹಾಯಕಿಯರಾದ ಪಿ.ಬಿ.ಗಿರಿಜಾ, ಭವ್ಯ, ಮಂಜುಳ, ದಿನಕರ, ಬಣಕಾರ ವೀರಭದ್ರಪ್ಪ, ರಿಯಾಜ್ ಆಹಮ್ಮದ್, ಮರುಳಸಿದ್ದಪ್ಪ, ಜಿಲಾನ್ ಇನ್ನಿತರರಿದ್ದರು.