ಅರ್ಜುನ್ ಮೌರ್ಯಗೆ ಭಾರತೀಯ ಸಾಹಿತ್ಯ ರತ್ನ ಪ್ರಶಸ್ತಿ

ಅರ್ಜುನ್ ಮೌರ್ಯಗೆ ಭಾರತೀಯ ಸಾಹಿತ್ಯ ರತ್ನ ಪ್ರಶಸ್ತಿ
Published on

ವಿರಾಜಪೇಟೆ: ಕೊಡಗಿನ ಕವಿ, ಬರಹಗಾರ, ಕೊಡಗು ಜಿಲ್ಲಾ ದಸಾಪ ಅಧ್ಯಕ್ಷ ಅರ್ಜುನ್ ಮೌರ್ಯ ಅವರ ಸಾಹಿತ್ಯ ಸೇವೆ ಗುರುತಿಸಿ ಅನ್ವೇಷಣೆ ಸಾಹಿತ್ಯ ಅಕಾಡೆಮಿ ವತಿಯಿಂದ 2025ರ ರಾಷ್ಟ್ರಮಟ್ಟದ ಭಾರತೀಯ ಸಾಹಿತ್ಯ ರತ್ನ-2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ನಯನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಗೌರವಿಸಲಾಯಿತು. ಇವರ ಜತೆಗೆ ಡಾ.ವಡ್ಡೆ ಹೇಮಲತಾ, ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್, ತಿಲಕನಾಥ ಮಂಜೇಶ್ವರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದ ನೂರು ಚಲನಚಿತ್ರಗಳ ನಿರ್ದೇಶಕ ಓಂ ಸಾಯಿಪ್ರಕಾಶ್, 350ಕ್ಕೂ ಹೆಚ್ಚು ಕಾದಂಬರಿ ಬರೆದಿರುವ ಹೆಸರಾಂತ ಸಾಹಿತಿ ಕೌಂಡಿನ್ಯ, ಹಿರಿಯ ಸಾಹಿತಿ ಬೇಲೂರು ರಾಮಮೂರ್ತಿ, ಸಾಹಿತಿ ಡಾ.ಸಿದ್ದರಾಮ ಹೊನ್ಕಲ್, ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಭದ್ರಾವತಿ ರಾಮಚಾರಿ, ರಾಗಂ ಇತರರು ಇದ್ದರು.

ಅರ್ಜುನ್ ಮೌರ್ಯ ಒಂಬತ್ತು ಕೃತಿಗಳನ್ನು ರಚಿಸಿದ್ದು, ಸೇಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net